ಬಿಹಾರದ ಮುಂಗೇರ್ನಲ್ಲಿ ₹ 1.5 ಲಕ್ಷ ಮೌಲ್ಯದ ಐಫೋನ್ ನೀಡಲು ನಿರಾಕರಿಸಿದ್ದಕ್ಕೆ 18 ವರ್ಷದ ಯುವತಿಯೊಬ್ಬಳು ಬ್ಲೇಡ್ನಿಂದ ತನ್ನ ಕೈಯನ್ನು ಕೊಯ್ದುಕೊಂಡು ಹಲವಾರು ಸ್ಥಳಗಳಲ್ಲಿ ತನ್ನನ್ನು ಗಾಯಗೊಳಿಸಿಕೊಂಡ ಘಟನೆ ನಡೆದಿದೆ.
ತನ್ನ ಸ್ನೇಹಿತನೊಂದಿಗೆ ಮಾತನಾಡಲು ಐಫೋನ್‌ಗಾಗಿ ಯುವತಿ ಬೇಡಿಕೆಯಿಟ್ಟಿದ್ದು, ಇದಕ್ಕೆ ಪಾಲಕರು ನಿರಾಕರಿಸಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿ ಇಂತಹ ನಿರ್ಧಾರ ಕೈಗೊಂಡಿದ್ದಾಗಿ ಯುವತಿ ಹೇಳಿಕೊಂಡಿದ್ದಾಳೆ.
ಯುವತಿ ಮೂರು ತಿಂಗಳಿನಿಂದ ತನ್ನ ತಾಯಿಯನ್ನು ಐಫೋನ್ ಕೊಡಿಸುವಂತೆ ಕೇಳುತ್ತಿದ್ದಳು, ತನ್ನ ಸಂಗಾತಿಯೊಂದಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ, ಅವರೊಂದಿಗೆ ಓಡಿಹೋಗಿ ಮದುವೆಯಾಗಿದ್ದೇನೆ ಎಂದು ಹೇಳಿದ್ದಳು. ಕುಟುಂಬದ ಆರ್ಥಿಕ ಸ್ಥಿತಿಯಿಂದಾಗಿ ಫೋನ್ ಬೇಡಿಕೆಯನ್ನು ನಿರಾಕರಿಸಿದ ಬಳಿಕ, ಯುವತಿ ತನ್ನನ್ನು ಕೋಣೆಯಲ್ಲಿ ಲಾಕ್ ಮಾಡಿಕೊಂಡು ತನ್ನ ಎಡ ಮಣಿಕಟ್ಟನ್ನು ಬ್ಲೇಡ್ನಿಂದ ಕೊಯ್ದುಕೊಳ್ಳಲು ಪ್ರಾರಂಭಿಸಿದಳು. ಗಂಭೀರ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಕೆಯ ತಾಯಿ ಕುಟುಂಬದ ಆರ್ಥಿಕ ಸ್ಥಿತಿಯನ್ನು ತಿಳಿಸಿದ್ದು, ಅಂತಹ ದುಬಾರಿ ಫೋನ್ ಅನ್ನು ಕೊಡಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದೀಗ ಯುವತಿ ತಾನು ಮತ್ತೆ ಆ ಹೆಜ್ಜೆ ಇಡುವುದಿಲ್ಲ ಎಂದು ಭರವಸೆ ನೀಡಿದ್ದಾಳೆ.
ಯುವತಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಆಕೆಗೆ ಉಂಟಾದ ಗಾಯಗಳು ಆಳವಾಗಿಲ್ಲದಿದ್ದರೂ, ಅವು ಹುಣ್ಣುಗಳಾಗಿ ಬದಲಾಗದಂತೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಿದರು. ಸದ್ಯ ಆಕೆ ಸ್ಥಿರವಾಗಿದ್ದು ಮತ್ತು ಯಾವುದೇ ಪ್ರಾಣಾಪಾಯದಿಂದ ಹೊರಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.