ಚಿತ್ರದುರ್ಗ: ಟೊಮ್ಯಾಟೊಗೆ ಮಾರುಕಟ್ಟೆಯಲ್ಲಿಯೂ ಬೆಲೆ ಸಿಗದೆ, ಹಾಕಿದ ಬಂಡವಾಳವೂ ಸಿಗದೇ ಟೊಮ್ಯಾಟೊ ಬೆಳೆಯನ್ನು ರಸ್ತೆಗೆ ಸುರಿದು ಆಕ್ರೋಶ ಹೊರ ಹಾಕುತ್ತಿದ್ದಾರೆ ಕೋಟೆನಾಡಿನ ಅನ್ನದಾತರು. ಇನ್ನು, ಈ ದೃಶ್ಯ ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ತಾಲೂಕಿನ ಚಿಕ್ಕಮ್ಮನಹಳ್ಳಿ, ಕೆಳಗಳಹಟ್ಟಿ ಗ್ರಾಮದ ಬಳಿ.
ಹೌದು, ಕಳೆದ ಒಂದು ವಾರದಿಂದಲೂ ಟೊಮ್ಯಾಟೊ ಬೆಳೆದ ರೈತರು ಕಂಗಾಲಾಗಿ ಹೋಗಿದ್ದು, ಜಮೀನಿನಲ್ಲಿ ಹಾಕಿದ ಬೆಳೆಯನ್ನು ಮಾರುಕಟ್ಟೆಗೆ ಮಾರಲು ತೆಗೆದುಕೊಂಡು ಹೋದ್ರೆ, ಅಲ್ಲಿ ಒಂದು ಬಾಕ್ಸ್ ಕೇವಲ 10-20 ರೂ ಗಳನ್ನು ಕೇಳ್ತಿರೋದಕ್ಕೆ ರೈತರು ಆಕ್ರೋಶಗೊಂಡಿದ್ದಾರೆ.
ಸುಮಾರು 5 ಎಕರೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆಯೋದಕ್ಕೆ 8 ಲಕ್ಷ ಹಣ ಖರ್ಚು ಮಾಡಿದ್ದು, ಬ್ಯಾಂಕ್ ಗಳಲ್ಲಿ ಸಾಲ ಸೂಲ ಮಾಡಿ ಹಣ ತಂದು ಜಮೀನಿನಲ್ಲಿ ಬೆಳೆ ಬೆಳೆಯೋದಕ್ಕೆ ಹಾಕಿದ್ದೀವಿ ಆದ್ರೆ ಟೊಮ್ಯಾಟೊ ಬೆಲೆ ಕುಸಿತದಿಂದ ರೈತರಿಗೆ ತುಂಬಾ ಸಂಕಷ್ಟ ಎದುರಾಗಿದೆ ಎಂದು ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.