ಪ್ರಧಾನ ಮಂತ್ರಿ ಕುಸುಮ್ ಯೋಜನೆ: ಕೃಷಿ ಜಮೀನು ಹೊಂದಿರುವ ರೈತರಿಗೆ ನೆರವು ನೀಡಲು ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಪೈಕಿ ಪಿಎಂ ಕುಸುಮ್ ಯೋಜನೆಯೂ (Pradhan Mantri Kusum Yojana) ಒಂದು.
ಈ ಯೋಜನೆಯ ಅಡಿಯಲ್ಲಿ ಜಮೀನಿನಲ್ಲಿ ಸೋಲಾರ್ ಪಂಪ್ (Solar Pump) ಅಳವಡಿಸುವ ಸಾಮಾನ್ಯ ವರ್ಗದ ರೈತರಿಗೆ ಶೇ. 90ರಷ್ಟು ಸಹಾಯಧನ (Subsidy) ದೊರೆಯುತ್ತದೆ. SC ಮತ್ತು ST ವರ್ಗಕ್ಕೆ ಸೇರಿದ ರೈತರಿಗೆ ಶೇ. 95 ರಷ್ಟು ಸಬ್ಸಿಡಿ ನೀಡುತ್ತದೆ. 2019ರಲ್ಲಿ ಜಾರಿಗೆ ಬಂದ ಪಿಎಂ ಕುಸುಮ್ ಯೋಜನೆಯು ಪರ್ಯಾಯ ಮತ್ತು ಹಸಿರು ಇಂಧನ ಎನಿಸಿರುವ ಸೌರ ವಿದ್ಯುತ್ ಉತ್ಪಾದನೆ (Solar Power Generation) ಹೆಚ್ಚಿಸಲು ರೂಪಿಸಿರುವ ಯೋಜನೆಯಾಗಿದೆ.
ಇದನ್ನೂ ಓದಿ: Equity Mutual Fund | ಈಕ್ವಿಟಿ ಫಂಡ್ ಎಂದರೇನು? ಈಕ್ವಿಟಿ ಮ್ಯೂಚುವಲ್ ಫಂಡ್ ಗಳಲ್ಲಿ ಏಕೆ ಹೂಡಿಕೆ ಮಾಡಬೇಕು? ಯೋಜನಗಳೇನು
ಕೇಂದ್ರ ಸರ್ಕಾರದ ಮಹತ್ವದ ಕುಸುಮ್ ಯೋಜನೆಯಿಂದ ಉತ್ತಮ ಆದಾಯ ಪಡೆಯಬಹುದು
ಪಿಎಂ ಕುಸುಮ್ ಯೋಜನೆಯು ಮರುಬಳಕೆ ಇಂಧನ ಸಚಿವಾಲಯದ ಅಡಿಯಲ್ಲಿ ಚಾಲನೆಯಲ್ಲಿರುವ ಯೋಜನೆಯಾಗಿದೆ. ಇದು ಪಿಎಂ ಕಿಸಾನ್ ಊರ್ಜಾ ಸುರಕ್ಷಾ ಮತ್ತು ಉತ್ಥಾನ ಮಹಾಭಿಯಾನ. ಇದರಲ್ಲಿ ರೈತರು ತಮ್ಮ ಭೂಮಿಯನ್ನು ಸೌರ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಬಹುದು. ಸ್ವಂತ ಬಳಕೆಯ ಬಳಿಕ ಉಳಿಯುವ ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್ಗೆ ಕಳುಹಿಸಿ ಅದರಿಂದ ಆದಾಯ ಪಡೆಯಬಹುದು. ರಾಜ್ಯದ ಡಿಸ್ಕಾಮ್ಗಳು ಅಥವಾ ವಿದ್ಯುತ್ ಪ್ರಸರಣ ಸಂಸ್ಥೆಗಳು ರೈತರಿಂದ ಸೌರ ವಿದ್ಯುತ್ ಖರೀದಿ ಮಾಡುತ್ತವೆ. ಜೊತೆಗೆ ಕಡಿಮೆ ಖರ್ಚಿನಲ್ಲಿ ನೀರಾವರಿ ಕೃಷಿ ಕೂಡ ಮಾಡಬಹುದು.
ಇದನ್ನೂ ಓದಿ: ಯುನಿಟ್ ಲಿಂಕ್ಡ್ ವಿಮಾ ಯೋಜನೆ ವಿಧಗಳು, ತೆರಿಗೆ ಪ್ರಯೋಜನಗಳು
ಪ್ರಧಾನ ಮಂತ್ರಿ ಕುಸುಮ್ ಯೋಜನೆಯ ಲಾಭ ಪಡೆಯುವುದು ಹೇಗೆ?
ರೈತರು ನೀರಾವರಿ ಸಮಸ್ಯೆಯಿಂದ ಪಾರಾಗಲು ತಂದಿರುವ ಪಿಎಂ ಕುಸುಮ್ ಯೋಜನೆಯು ಸೋಲಾರ್ ಪಂಪ್‌ಗಳನ್ನು ಅಳವಡಿಸಲು ಸಬ್ಸಿಡಿ ರೂಪದಲ್ಲಿ ಸಹಾಯ ಮಾಡುತ್ತದೆ.
ಈ ಯೋಜನೆಯಡಿ ರೈತರು ಸೌರ ಫಲಕಗಳ ಒಟ್ಟು ವೆಚ್ಚದಲ್ಲಿ 10 ಪರ್ಸೆಂಟ್‌ನಷ್ಟು ಹೂಡಿಕೆ ಮಾಡಬೇಕಾಗಿದ್ದು, ಕೇಂದ್ರ ಸರ್ಕಾರವು 30 ಪರ್ಸೆಂಟ್‌ನಷ್ಟು ಸಬ್ಸಿಡಿಯಾಗಿ ನೀಡುವುದಲ್ಲದೆ, 30 ಪರ್ಸೆಂಟ್‌ನಷ್ಟು ಪಾಲನ್ನು ರಾಜ್ಯ ಸರ್ಕಾರವು ಸಬ್ಸಿಡಿ ರೂಪದಲ್ಲಿ ನೀಡಲಿದ್ದು, ಉಳಿದ 30 ಪರ್ಸೆಂಟ್‌ನಷ್ಟು ಹಣವನ್ನು ರೈತರು ಸಾಲವಾಗಿ ಬ್ಯಾಂಕ್‌ನಿಂದ ಪಡೆಯಬಹುದು.
ಇದನ್ನೂ ಓದಿ: ಮಹಿಳೆಯರಿಗಾಗಿ ಸರ್ಕಾರದ ತಾಯಿ ಭಾಗ್ಯ ಯೋಜನೆ; ಸೌಲಭ್ಯಗಳು, ಅರ್ಜಿ ಸಲ್ಲಿಕೆ
ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡುವ ಪ್ರಧಾನ ಮಂತ್ರಿ ಕುಸುಮ್ ಯೋಜನೆ
ಪಿಎಂ ಕುಸುಮ್ ಯೋಜನೆಯು ಉದ್ಯೋಗ ಸೃಷ್ಟಿಗೂ ಕಾರಣವಾಗುತ್ತದೆ. ಒಂದು ಮೆಗಾ ವ್ಯಾಟ್ ಸಣ್ಣ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಸ್ಥಾಪನೆಯಿಂದ 24.50 ಉದ್ಯೋಗ ಸೃಷ್ಟಿಯಾಗುತ್ತದೆ.
ಈ ಲೆಕ್ಕಾಚಾರದಲ್ಲಿ ಪ್ರಧಾನ ಮಂತ್ರಿ ಕುಸುಮ್ ಯೋಜನೆಯಿಂದ ಒಟ್ಟು 7.55 ಲಕ್ಷ ಉದ್ಯೋಗವರ್ಷ ನಿರ್ಮಾಣವಾಗಬಹುದಾಗಿದ್ದು, ಮಾರ್ಚ್ 2026 ರ ವೇಳೆಗೆ, ಸರ್ಕಾರವು 34,800 MW ಇಂಧನವನ್ನು ಸೇರಿಸುವ ಗುರಿಯನ್ನು ಹೊಂದಿದೆ. ಹೆಚ್ಚಿನ ಮಾಹಿತಿಗೆ https://www.india.gov.in/ ಭೇಟಿ ನೀಡಬಹುದು.
ಪ್ರಧಾನ ಮಂತ್ರಿ ಕುಸುಮ್ ಯೋಜನೆಯ ಪ್ರಯೋಜನಗಳು
ಕುಸುಮ್ ಯೋಜನೆಯಲ್ಲಿ ಸೌರ ಪಂಪ್‌ಗಳು 720 MV ಸಾಮರ್ಥ್ಯ ಇರುವ ಕಾರಣ ನೀರಾವರಿಯನ್ನು ಸುಧಾರಿಸುತ್ತವೆ. ಸೌರ ಸ್ಥಾವರಗಳು ಒಟ್ಟು 28,250 MW ವಿದ್ಯುತ್ ಉತ್ಪಾದಿಸಬಹುದು. ಈ ಯೋಜನೆಯನ್ನು ಬಳಸುವ ಮೂಲಕ, ರೈತರು ತಮ್ಮ ಸ್ಥಾವರಗಳಿಂದ ಉತ್ಪತ್ತಿಯಾಗುವ ಹೆಚ್ಚುವರಿ ವಿದ್ಯುತ್ ಅನ್ನು ನೇರವಾಗಿ ಸರ್ಕಾರಕ್ಕೆ ಮಾರಾಟ ಮಾಡಬಹುದು. ಇದು ಅವರ ಆದಾಯವನ್ನು ಹೆಚ್ಚಿಸುತ್ತದೆ. ಇನ್ನು, ಈ ಯೋಜನೆಯಿಂದ ಗ್ರಾಮೀಣ ಪ್ರದೇಶದ ಭೂಮಾಲೀಕರು ಬಂಜರು, ಕೃಷಿ ಮಾಡದ ಭೂಮಿಯಲ್ಲಿ ಸೋಲಾರ್ ಪ್ಲಾಂಟ್‌ಗಳನ್ನು ಅಳವಡಿಸುವ ಮೂಲಕ ಸ್ಥಿರ ಆದಾಯ ಗಳಿಸಬಹುದು.
ಇದನ್ನೂ ಓದಿ: Fastest internet | ವಿಶ್ವದಲ್ಲೇ ಅತಿ ಹೆಚ್ಚು ವೇಗದ ಇಂಟರ್‌ನೆಟ್ ಸ್ಪೀಡ್ ಹೊಂದಿರುವ ರಾಷ್ಟ್ರಗಳು
ಪಿಎಂ ಕುಸುಮ್ ಯೋಜನೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಹೇಗೆ?
- ಅಧಿಕೃತ ವೆಬ್‌ಸೈಟ್ https://www.india.gov.in/ ಗೆ ಭೇಟಿ ನೀಡಿ.
- ಅಗತ್ಯ ಮಾಹಿತಿಯೊಂದಿಗೆ ನೋಂದಣಿ ಫಾರ್ಮ್ ಪೂರ್ಣಗೊಳಿಸಿ.
- ಎಲ್ಲವನ್ನು ಸರಿಯಾಗಿ ಪರಿಶೀಲಿಸಿದ ನಂತರ ಸಲ್ಲಿಸು ಕ್ಲಿಕ್ ಮಾಡಿ.
- ಸೌರ ಕೃಷಿ ಪಂಪ್‌ಸೆಟ್ ಸಬ್ಸಿಡಿ ಯೋಜನೆಯಲ್ಲಿ ಲಾಗ್ ಇನ್ ಕ್ಲಿಕ್ ಮಾಡಿ.
- ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ.
ಪ್ರಧಾನ ಮಂತ್ರಿ ಕುಸುಮ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ಇನ್ನು, ಪ್ರಧಾನ ಮಂತ್ರಿ ಕುಸುಮ್ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಫಲಾನುಭವಿಗಳು ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಡಿಕ್ಲರೇಶನ್ ಫಾರ್ಮ್ ಮತ್ತು ಬ್ಯಾಂಕ್ ಖಾತೆ ವಿವರಗಳಂತಹ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಪುರಸ್ಕೃತ ಅರ್ಜಿದಾರರಿಗೆ ಸರ್ಕಾರ 0.5mw ನಿಂದ 2mw ಸಾಮರ್ಥ್ಯದ ವಿದ್ಯುತ್ ಸ್ಥಾವರ ಖರೀದಿಸಲು ಸರ್ಕಾರ ನೆರವು ಒದಗಿಸಲಿದ್ದು, ಹೆಚ್ಚಿನ ಮಾಹಿತಿಯನ್ನು ವಿಡಿಯೋದಲ್ಲಿ ನೋಡಬಹುದು.
ಕೃಪೆ: ET Kannada