ಬೆಳಗಾವಿ: ಮನೆಗೆ ನುಗ್ಗಿ 9 ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಅಥಣಿ ತಾಲ್ಲೂಕಿನ ಚಿಕ್ಕೋಡ ಗ್ರಾಮದಲ್ಲಿ ನಡೆದಿದೆ. ಸುವರ್ಣ ಮಠಪತಿ(33) ಹತ್ಯೆಗೊಳಗಾದ ದುರ್ದೈವಿಯಾಗಿದ್ದಾರೆ.
ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಗರ್ಭಿಣಿ ಸುವರ್ಣ ಮಠಪತಿ ಹೊಟ್ಟೆಗೆ ಒದ್ದು ಆಯುಧಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಯಾವುದೋ ಹಳೆಯ ದ್ವೇಷಕ್ಕೆ ಈ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ. ಅಥಣಿ ಪೊಲೀಸರು 2 ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.