ಸ್ವಾಮೀಜಿ ಆತ್ಮಹತ್ಯೆ; ಡೆತ್​ನೋಟ್‌ ವೈರಲ್: ಅದರಲ್ಲೇನಿದೆ?

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವಸಿದ್ದಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ಬರೆದಿಟ್ಟಿದ್ದ ಡೆತ್​ನೋಟ್‌ ಲಭ್ಯವಾಗಿದೆ. ಹೌದು, ಬಸವಸಿದ್ದಲಿಂಗ ಸ್ವಾಮೀಜಿ ಡೆತ್​ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು,…

Basavasiddhalinga Swamiji

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವಸಿದ್ದಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ಬರೆದಿಟ್ಟಿದ್ದ ಡೆತ್​ನೋಟ್‌ ಲಭ್ಯವಾಗಿದೆ.

ಹೌದು, ಬಸವಸಿದ್ದಲಿಂಗ ಸ್ವಾಮೀಜಿ ಡೆತ್​ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಅದರಲ್ಲಿ ‘ನಾನು ಯಾವುದೇ ತಪ್ಪನ್ನು ಮಾಡಿಲ್ಲ. ಈ ಲೋಕದ ಗೊಡವೆ ಸಾಕಾಗಿದೆ. ಹಾಗಾಗಿ ನಾನು ಮಡಿವಾಳೇಶ್ವರನ ಕಡೆ ಪಯಣ ಬೆಳೆಸಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ. ನನ್ನ ಆತ್ಮಹತ್ಯೆ ಸಂಬಂಧ ಯಾರನ್ನೂ ತನಿಖೆಗೆ ಒಳಪಡಿಸಬೇಡಿ. ನನ್ನನ್ನು ತಾಯಿ & ಮಠದ ಭಕ್ತರು ಕ್ಷಮಿಸಬೇಕೆಂದು’ ಬರೆದಿದ್ದಾರೆ.

ಇನ್ನು, ಕೆಲವು ದಿನಗಳ ಹಿಂದೆ ಇಬ್ಬರು ಮಹಿಳೆಯರು ಮಾತನಾಡಿರುವ ಆಡಿಯೋ ರಿಲೀಸ್ ಆಗಿದ್ದು, ಅದರಲ್ಲಿ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವಸಿದ್ದಲಿಂಗ ಸ್ವಾಮಿಯ ಹೆಸರು ಪ್ರಸ್ತಾಪಿಸಿರುವುದೇ ಈ ಆತ್ಮಹತ್ಯಗೆ ಕಾರಣ ಎಂದು ಹೇಳಲಾಗುತ್ತಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.