ಬೆಂಗಳೂರು: ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅವರು ಇಂದು ವಿಧಾನ ಪರಿಷತ್ತಿನಲ್ಲಿ ಗೋಹತ್ಯೆ ನಿಷೇಧ ಕಾಯಿದೆಯನ್ನು ಮಂಡಿಸಲು ಮುಂದಾಗಿದ್ದು, ಇದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸದಸ್ಯರು ಒಪ್ಪದೇ ಪ್ರತಿಭಟನೆಗೆ ಇಳಿದರು.
ಈ ವೇಳೆ ಸಭಾಪತಿಗಳು ಕಾಯಿದೆ ಬಗ್ಗೆ ಚರ್ಚಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದರು. ಬಳಿಕ ಉಭಯ ಪಕ್ಷಗಳ ಸದಸ್ಯರೂ ಕೂಡ ಪ್ರತಿಭಟನೆಯಿಂದ ಹಿಂದೆ ಸರಿದು ಸುಮ್ಮನಾದರು. ಈ ಕಾಯಿದೆಯನ್ನು ಈಗಾಗಲೇ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿದೆ.
ಗೋಹತ್ಯೆ ನಿಷೇಧ ಕಾಯಿದೆ 13 ವರ್ಷ ಮೇಲ್ಪಟ್ಟ ಪಶುಗಳಿಗೆ ಅನ್ವಯಿಸಲ್ಲ: ಬೊಮ್ಮಾಯಿ
ಇನ್ನು ವಿಧಾನ ಪರಿಷತ್ ನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಈ ವೇಳೆ, ಕೆಲ ಪಶುಗಳು ಈಗಾಗಲೇ ಅಳಿವಿನಂಚಿನಲ್ಲಿವೆ. ಹಾಗಾಗಿ ಗೋಹತ್ಯೆ ನಿಷೇಧಗೊಳಿಸುವ ಜೊತೆಗೆ ಅವುಗಳನ್ನು ರಕ್ಷಿಸಲು ಈ ಕಾಯಿದೆ ಜಾರಿಗೊಳಿಸಿದ್ದೇವೆ.
ಆದರೆ ಈ ಕಾಯಿದೆಯು 13 ವರ್ಷ ಮೇಲ್ಪಟ್ಟ ಪಶುಗಳಿಗೆ ಅನ್ವಯವಾಗುವುದಿಲ್ಲ. ಈ ಕಾಯಿದೆಯನ್ನು ಈಗಾಗಲೇ ದೇಶದ 14 ರಾಜ್ಯಗಳಲ್ಲಿ ಜಾರಿಗೆ ತರಲಾಗಿದೆ. ನಮ್ಮಲ್ಲೂ ಕೂಡ ಜಾರಿಯಾಗಿದೆ. ಕಾಯಿದೆಯನ್ನು ವಿಧಾನ ಪರಿಷತ್ತಿನಲೂ ಮಂಡಿಸಲಿದ್ದೇವೆ ಎಂದು ಹೇಳಿದರು.