ಲಖನೌ: ಬಾಬ್ರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌ ಸಿಬಿಐ ವಿಶೇಷ ಕೋರ್ಟ್ ನ್ಯಾಯಾಧೀಶರಾದ ಎಸ್.ಕೆ ಯಾದವ್ ಅವರು ಸೆ.30 ರಂದು ತೀರ್ಪನ್ನು ನೀಡಲಿದ್ದಾರೆ.
1990ರ ದಶಕದಲ್ಲಿ ದೇಶದಾದ್ಯಂತ ಬುಗಿಲೆದ್ದಿದ್ದ ಹಿಂದುತ್ವದ ಅಲೆ, ಹಿಂದೂ ರಾಷ್ಟ್ರೀಯತೆ ಸ್ಥಾಪನೆಯ ಪ್ರಬಲ ಪ್ರತಿಪಾದನೆ, ಬಾಬರಿ ಮಸೀದಿ ಧ್ವಂಸಕ್ಕೆ ದಾರಿ ಮಾಡಿತ್ತು.
1992 ರ ಡಿಸೇಂಬರ್ 6 ರಂದು ಬಾಬ್ರಿ ಮಸೀದಿ ದ್ವಂಸವಾಗಿತ್ತು. ಬಾಬ್ರಿ ಮಸೀದಿ ದ್ವಂಸ ಪ್ರಕರಣಲ್ಲಿ ಪ್ರಮುಖ ಆರೋಪಿಗಳಾದ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ ಸೇರಿ ಎಲ್ಲರು ಸೆ.30 ರಂದು ಲಖನೌ ಸಿಬಿಐ ವಿಶೇಷ ಕೋರ್ಟ್ಗೆ ಹಾಜರಾಗುವಂತೆ ನ್ಯಾಯಾಧೀಶರಾದ ಎಸ್ ಕೆ ಯಾದವ್ ಅವರು ಸೂಚನೆ ನೀಡಿದ್ದಾರೆ.
ಈಗ ಬಾಬ್ರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌ ಸಿಬಿಐ ವಿಶೇಷ ಕೋರ್ಟ್ ತೀರ್ಪನ್ನು ನೀಡಲಿದ್ದು ಅಡ್ವಾಣಿ ಸೇರಿ ಹಲವರ ಭವಿಷ್ಯ ನಿರ್ಧಾರವಾಗಲಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment