ನೆಲ್ಲೂರು: ವೈದ್ಯರೊಬ್ಬರು ಕೊರೊನಾ ಸೋಂಕಿಗೆ ಆಯುರ್ವೇದ ಔಷಧ ಕಂಡುಹಿಡಿದಿದ್ದು, ಔಷಧಕ್ಕಾಗಿ ಜನ ವೈದ್ಯನ ಮನೆ ಮುಂದೆ ಮುಗಿಬಿದ್ದ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ನಡೆದಿದೆ.
ಕೃಷ್ಣಪಟ್ಟಣಂನ ಆಯುರ್ವೇದ ವೈದ್ಯ ಆನಂದಯ್ಯ ಔಷಧ ಕಂಡುಹಿಡಿದವರಾಗಿದ್ದು, ಸ್ಥಳದಲ್ಲಿ ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ಔಷಧವನ್ನು ಐಸಿಎಂಆರ್ ಕಳುಹಿಸಲು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಆಯುರ್ವೇದ ಔಷಧ; ಪರಿಶೀಲನೆ:
ಇನ್ನು ಕೊರೋನಾಗೆ ಆಯುರ್ವೇದ ಔಷಧ ಕಂಡುಹಿಡಿಯಲಾಗಿದೆ ಎನ್ನಲಾಗುತ್ತಿದ್ದು, ಸೋಮವಾರದಿಂದ ವೈಜ್ಞಾನಿಕವಾಗಿ ಪರೀಕ್ಷಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೃಷ್ಣಪಟ್ಟಂನಲ್ಲಿ ತಯಾರಿಕೆ ಪ್ರಕ್ರಿಯೆ & ಬಳಕೆದಾರರ ಅಭಿಪ್ರಾಯ ಸಂಗ್ರಹಿಸಿ ಸಮಗ್ರ ಅಧ್ಯಯನ ಮಾಡುವುದಾಗಿ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್ ಸಿಂಘಾಲ್ ಹೇಳಿದ್ದು, ಈ ಔಷಧ ಬಳಕೆಯಿಂದ ಅಡ್ಡಪರಿಣಾಮಗಳೇನು ಆಗಿಲ್ಲ ಎಂದು ಅವರು ತಿಳಿಸಿದ್ದಾರೆ.