ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರೋದನ್ನ ಖಂಡಿಸಿ ಸಿದ್ದರಾಮಯ್ಯ ಪರವಾಗಿ ಇಂದು ಬೆಂಗಳೂರಿನಲ್ಲಿ ಶೋಷಿತ ಸಂಘಟನೆಗಳ ಒಕ್ಕೂಟ ಶಕ್ತಿ ಪ್ರದರ್ಶನ ಮಾಡಿದರು. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಒಕ್ಕೂಟ ರಾಜ್ಯಪಾಲ ನಡೆಯನ್ನ ತೀವ್ರವಾಗಿ ಖಂಡಿಸಿದರು.
ಒಕ್ಕೂಟ ಸದಸ್ಯರೆಲ್ಲ ರಾಜ್ಯಪಾಲರ ನಡೆ ಮತ್ತು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು, ಮಾವಳ್ಳಿ ಶಂಕರ್ ಭಾಷಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಅವರು ಶಾ ಅವರೇ ಸಿದ್ದರಾಮಯ್ಯ ಮುಂದೆ ಯಾವ ಅಮಿತ್ ಶಾ ಅಲ್ಲಾ ಎಂದೆಲ್ಲ ವಾಗ್ದಾಳಿ ನಡೆಸಿದರು.. ಗ್ಯಾರಂಟಿ ಯೋಜನೆಗಳು ಅನ್ನ ಭಾಗ್ಯ ಕೊಟ್ಟ ಸಿದ್ದರಾಮಯ್ಯನವರ ಪರವಾಗಿ ನಾವೆಲ್ಲ ಇದ್ದೇವೆ , ಸಿದ್ದರಾಮಯ್ಯ ಒಂಟಿ ಅಲ್ಲ, ಅವರ ಪರವಾಗಿ ನಾವೆಲ್ಲಾ ಇದ್ದೇವೆ ಎಂದರು.
ಅಲ್ದೇ ರಾಜ್ಯಪಾಲರ ನಡೆಯನ್ನ ವಿರೋಧಿಸಿ ಫ್ರೀಡಂ ಪಾರ್ಕ್ ನಿಂದ ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಒಕ್ಕೂಟ ಸದಸ್ಯರನ್ನ ಪೊಲೀಸರು ವಶಕ್ಕೆ ಪಡೆದರು.