Asteroid: ಬೃಹತ್ ಗಾತ್ರದ ಕ್ಷುದ್ರಗ್ರಹವೊಂದು (Asteroid) ಭೂಮಿಗೆ (Earth) ಅಪ್ಪಳಿಸಲು ನುಗ್ಗಿ ಬರುತ್ತಿದೆ ಎಂದು ಇಸ್ರೋ (ISRO) ಎಚ್ಚರಿಕೆ ನೀಡಿದೆ. ಅಪೋಫಿಸ್ (Apophis) ಎನ್ನುವ ಕ್ಷುದ್ರಗ್ರಹ ಭೂಮಿಯ ದಿಕ್ಕಿನಲ್ಲಿ ವೇಗವಾಗಿ ಸಾಗುತ್ತಿದ್ದು ಭೂಮಿಯ ಸಮೀಪ ಹಾದು ಹೋಗಲಿದೆ ಎನ್ನಲಾಗಿದೆ.
ಹೌದು, ಜಾಗತಿಕ ಮಟ್ಟದಲ್ಲಿ ರಕ್ಷಣಾ ಸಾಮರ್ಥ್ಯ ಅಭಿವೃದ್ಧಿಪಡಿಸಲು ಇಸ್ರೋ ಸೇರಿದಂತೆ ವಿವಿಧ ರಾಷ್ಟ್ರಗಳ ಬಾಹ್ಯಾಕಾಶ ಸಂಸ್ಥೆಗಳು ಮುಂದಾಗಿವೆ. 370 ಮೀ. ವ್ಯಾಸ ಹೊಂದಿರುವ ‘ಅಪೋಫಿಸ್’ ಹೆಸರಿನ ಕ್ಷುದ್ರಗ್ರಹವು ಭೂಮಿಯ ಸಮೀಪ ಹಾದು ಹೋಗಲಿದೆ.
ಈ ಕ್ಷುದ್ರಗ್ರಹದ ವೇಗ ಗಮನಿಸಿದರೆ 2029ರಲ್ಲಿ ಇದು ಭೂಮಿಯನ್ನು ಸಮೀಪಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಕ್ಷುದ್ರಗ್ರಹ ಭೂಮಿಗೆ ಡಿಕ್ಕಿಯಾಗುವ ಸಾಧ್ಯತೆ ಕಡಿಮೆಯಿದೆ. ಆತಂಕ ಪಡುವ ಅಗತ್ಯವಿಲ್ಲ ಎಂದು ಎಂದು ಇಸ್ರೋ ತಿಳಿಸಿದೆ. ಅಪೋಫಿಸ್ ಕ್ಷುದ್ರಗ್ರಹ ಭೂಮಿಯ 32,000 ಕಿಮೀ ಸಮೀಪ ಹಾದುಹೋಗಲಿದೆ.
Panchanga | ಇಂದು ಧನು ರಾಶಿಯಲ್ಲಿ ಚಂದ್ರನ ಸಂಚಾರ; ಇಲ್ಲಿದೆ ಶುಭ ಮುಹೂರ್ತ, ಅಶುಭ ಮುಹೂರ್ತದ ಮಾಹಿತಿ!