ಕ್ಷಿಪ್ರಗತಿಯಲ್ಲಿ ಸಮರ್ಪಕ ರೀತಿಯಲ್ಲಿ ರಾಜ್ಯವನ್ನು ನಂ.1 ಮಾಡಲು ನಾವು ಬದ್ಧರಾಗಿದ್ದೇವೆ : ಅಶ್ವತ್ ನಾರಾಯಣ್

ಮೈಸೂರು : ಮೈಸೂರಿನ ಜೆ.ಎಸ್. ಎಸ್. ಮಹಾವಿದ್ಯಾಪೀಠದ ಜೆ.ಎಸ್. ಎಸ್. ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಆಶ್ರಯದಲ್ಲಿ ನಡೆಯುತ್ತಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ – 2020 ಅನುಷ್ಠಾನ: ಅವಕಾಶಗಳು ಮತ್ತು ಸವಾಲುಗಳು’ ವಿಚಾರ…

ಮೈಸೂರು : ಮೈಸೂರಿನ ಜೆ.ಎಸ್. ಎಸ್. ಮಹಾವಿದ್ಯಾಪೀಠದ ಜೆ.ಎಸ್. ಎಸ್. ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಆಶ್ರಯದಲ್ಲಿ ನಡೆಯುತ್ತಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ – 2020 ಅನುಷ್ಠಾನ: ಅವಕಾಶಗಳು ಮತ್ತು ಸವಾಲುಗಳು’ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು.

ಪರಮಪೂಜ್ಯ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಸಂಕಿರಣದಲ್ಲಿ ಸಚಿವರಾದ ಎಸ್ ಸುರೇಶ್ ಕುಮಾರ್, ಗಣ್ಯರಾದ ಡಾ.ಸಿ.ಜಿ. ಬೆಟಸೂರಮಠ ಅವರು ಉಪಸ್ಥಿತರಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ್ ಅವರು, “NEP ಯು ಪರಿಪೂರ್ಣ ಶಿಕ್ಷಣ ವ್ಯವಸ್ಥೆ ಮೂಲಕ ಸಮಾಜದ ಸಮಗ್ರ ಅಭಿವೃದ್ಧಿ ಕಾಣಲು ಅನುಕೂಲವಾಗುವಂತೆ ಅಪೂರ್ವವಾದ ಅವಕಾಶ ನಮ್ಮ ಮುಂದಿಟ್ಟಿದೆ.

Vijayaprabha Mobile App free

ಪ್ರಪಂಚದ ಯಾವುದೇ ಮೂಲೆಯ ಸದ್ವಿಚಾರಗಳನ್ನು ತಿಳಿದುಕೊಳ್ಳಲು ಹಾಗೂ ಎಲ್ಲೇ ಕುಳಿತು ಜ್ಞಾನಾರ್ಜನೆಗೆ ನೆರವಾಗಲು NEP2020 ಯಿಂದ ಸಾಧ್ಯವಾಗಲಿದೆ. ಸನಾತನ ಸಂಸ್ಕೃತಿ-ಪರಂಪರೆಯಲ್ಲಿ ಉನ್ನತಿಯಲ್ಲಿದ್ದ ಶಿಕ್ಷಣ ಕ್ಷೇತ್ರ ಜಾಗತೀಕರಣದ ಕಾಲದಲ್ಲಿಯೂ ಮತ್ತೊಮ್ಮೆ ಉನ್ನತ ಸ್ಥಾನಕ್ಕೆ ತಲುಪಲು ಈ ನೀತಿ ನೆರವಾಗಲಿದೆ ಎಂಬುದು ನನ್ನ ದೃಢ ನಂಬಿಕೆ.

ಇದಕ್ಕೆ ಪೂರಕವಾಗುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ನಮ್ಮ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಟಾಸ್ಕ್ ಫೋರ್ಸ್ ಹಾಗೂ ವಿಶ್ವವಿದ್ಯಾಲಯಗಳು ಸಲಹೆ-ಅಭಿಪ್ರಾಯ ಸಂಗ್ರಹಿಸಿ ಅನುಷ್ಠಾನ ಕಾರ್ಯದಲ್ಲಿ ಈಗಾಗಲೇ ನಿರತವಾಗಿವೆ. ಕ್ಷಿಪ್ರಗತಿಯಲ್ಲಿ ಸಮರ್ಪಕ ರೀತಿಯ ಅನುಷ್ಠಾನದೊಂದಿಗೆ ರಾಜ್ಯವನ್ನು ನಂ.1 ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಅಶ್ವತ್ ನಾರಾಯಣ್ ಅವರು ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.