‘ಅಡಿಕೆ ಕ್ಯಾನ್ಸರ್ ಕಾರಕ’ ಯಾವುದೇ ಆಧಾರವಿಲ್ಲದ ಅವೈಜ್ಞಾನಿಕ ವರದಿ: ವಿಶ್ವೇಶ್ವರ ಹೆಗಡೆ ಕಾಗೇರಿ

ಶಿರಸಿ: ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆಯಾದ ʼಇಂಟರ್‌ ನ್ಯಾಶನಲ್‌ ಏಜನ್ಸಿ ಫಾರ್‌ ರಿಸರ್ಚ್‌ ಆಂಡ್‌ ಕ್ಯಾನ್ಸರ್‌ʼ ನೀಡಿರುವ ‘ಅಡಿಕೆ ಕ್ಯಾನ್ಸರ್ ಕಾರಕ’ ಎಂಬುದು ಯಾವುದೇ ಆಧಾರವಿಲ್ಲದೇ ನೀಡಿದ ಅವೈಜ್ಞಾನಿಕ ವರದಿಯಾಗಿದೆ. ಈ ವಿಷಯವನ್ನು…

ಶಿರಸಿ: ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆಯಾದ ʼಇಂಟರ್‌ ನ್ಯಾಶನಲ್‌ ಏಜನ್ಸಿ ಫಾರ್‌ ರಿಸರ್ಚ್‌ ಆಂಡ್‌ ಕ್ಯಾನ್ಸರ್‌ʼ ನೀಡಿರುವ ‘ಅಡಿಕೆ ಕ್ಯಾನ್ಸರ್ ಕಾರಕ’ ಎಂಬುದು ಯಾವುದೇ ಆಧಾರವಿಲ್ಲದೇ ನೀಡಿದ ಅವೈಜ್ಞಾನಿಕ ವರದಿಯಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕೆಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದ್ದಾರೆ.

ಈಗಾಗಲೇ ಕ್ಯಾಂಪ್ಕೋ ಹಾಗೂ ಅನೇಕ ವಿಶ್ವವಿದ್ಯಾನಿಲಯಗಳು ಅಡಿಕೆ ಮೇಲೆ ಸಂಶೋಧನೆಗಳನ್ನು ಕೈಗೊಂಡು, ಅಡಿಕೆಯು ಕ್ಯಾನ್ಸರ್‌ ಕಾರಕವಲ್ಲ ಎಂಬ ವರದಿಯನ್ನು ನೀಡಿದ್ದಲ್ಲದೇ, ಅಡಿಕೆಯಲ್ಲಿ ಔಷಧೀಯ ಗುಣಗಳು ಸಹ ಇರುವ ಬಗ್ಗೆ ಉಲ್ಲೇಖಿಸಿರುತ್ತಾರೆ. ಇಂತಹ ಯಾವುದೇ ವೈಜ್ಞಾನಿಕ ಸಂಶೋಧನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಅಂಗಸಂಸ್ಥೆಯು ವರದಿ ನೀಡಿರುವುದು ಸಮಂಜಸವೆನಿಸುವುದಿಲ್ಲ‌ ಎಂದಿದ್ದಾರೆ. 

ಈ ವಿಷಯಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಡಬ್ಲೂಎಚ್ಓ ಸಂಸ್ಥೆಗೆ ತಿಳಿಸುವ ಮತ್ತು ಅವರಿಗೆ ಮನವರಿಕೆಯನ್ನೂ ಸಹ ಮಾಡುವ ಪ್ರಯತ್ನ ನಡೆಯುತ್ತಿದೆ. ಸಾವಿರಾರು ವರ್ಷಗಳಿಂದ ಅಡಿಕೆ ಬಳಕೆಯಲ್ಲಿದ್ದು ಪೂಜನೀಯ ಸ್ಥಾನದಲ್ಲಿದೆ. ತಂಬಾಕು ಬೇರ್ಪಟ್ಟ ಅಡಿಕೆ ಯಾವುದೇ ಕಾರಣಕ್ಕೂ ಆರೋಗ್ಯಕ್ಕೆ ಹಾನಿಕರವಲ್ಲ ಎನ್ನುವುದು ಅನೇಕ ಸಂಶೋಧನೆಗಳಿಂದ ಹಾಗೂ ವೈಜ್ಞಾನಿಕವಾಗಿಯೂ ದೃಡಪಟ್ಟಿದೆ. ಈ ಅಂಶಗಳನ್ನು, ವೈಜ್ಞಾನಿಕ ಸಂಶೋಧನೆಯ ಅಂಶಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಗಮನಕ್ಕೆ ತಂದಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.