ಮಹಿಳೆಯರಿಗೆ ಸುವರ್ಣಾವಕಾಶ: “ಅಕ್ಕ ಪಡೆ” ಯೋಜನೆಗೆ ಅರ್ಜಿ ಆಹ್ವಾನ

Akka Pade Scheme | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿ೦ದ ಸಮಾಜ ಸೇವೆಯ ನಿಟ್ಟಿನಲ್ಲಿ ರೂಪಿಸಲಾದ “ಅಕ್ಕ ಪಡೆ” ಯೋಜನೆಯಡಿ ಇದೀಗ ಹೊಸ ಅವಕಾಶ ಲಭ್ಯವಾಗಿದೆ. ಎಸ್‌ಎಸ್‌ಎಲ್ಸಿ, ಪಿಯುಸಿ ಅಥವಾ ಯಾವುದೇ…

Akka Pade Scheme vijayaprabha news

Akka Pade Scheme | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿ೦ದ ಸಮಾಜ ಸೇವೆಯ ನಿಟ್ಟಿನಲ್ಲಿ ರೂಪಿಸಲಾದ “ಅಕ್ಕ ಪಡೆ” ಯೋಜನೆಯಡಿ ಇದೀಗ ಹೊಸ ಅವಕಾಶ ಲಭ್ಯವಾಗಿದೆ. ಎಸ್‌ಎಸ್‌ಎಲ್ಸಿ, ಪಿಯುಸಿ ಅಥವಾ ಯಾವುದೇ ಪದವಿ ಪಾಸಾದ ಮಹಿಳೆಯರಿಗೆ ಇದು ಉತ್ತಮ ಸುವರ್ಣಾವಕಾಶ. ಗುತ್ತಿಗೆ ಆಧಾರದ ಮೇಲೆ 05 ಮಹಿಳಾ ಎನ್ಸಿಸಿ ಕೆಡೆಟ್ಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಇಲಾಖೆಯು ಅರ್ಜಿ ಆಹ್ವಾನಿಸಿದೆ.

ಯೋಜನೆಯ ಮುಖ್ಯ ಉದ್ದೇಶ

‘ಅಕ್ಕ ಪಡೆ’ ಯೋಜನೆಯ ಮುಖ್ಯ ಉದ್ದೇಶವು ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ಮತ್ತು ನೆರವು ಒದಗಿಸುವುದಾಗಿದೆ. ಈ ಪಡೆ ಸಹಾನುಭೂತಿ, ಸೇವಾಭಾವನೆ ಮತ್ತು ಸಮಾಜಮುಖಿ ಚಿ೦ತನೆ ಹೊಂದಿರುವ ಮಹಿಳೆಯರಿಗೆ ತಮ್ಮ ಸಾಮರ್ಥ್ಯ ತೋರಿಸಲು ವೇದಿಕೆಯಾಗಿದೆ. ಸಮಾಜದಲ್ಲಿ ಸುರಕ್ಷತೆ ಮತ್ತು ಶಿಕ್ಷಣದ ಕಿರು ಸೇತುವೆಯಾಗಿರುವ ಈ ಪಡೆ ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.

ಎನ್ಸಿಸಿ ಸರ್ಟಿಫಿಕೇಟ್

ಆಯ್ಕೆಗೆ ಅರ್ಹರಾಗಲು ಎನ್ಸಿಸಿ ‘ಸಿ’ ಸರ್ಟಿಫಿಕೇಟ್‌ ಹೊಂದಿರುವ 35 ರಿಂದ 45 ವರ್ಷದೊಳಗಿನ ಮಹಿಳಾ ಕೆಡೆಟ್ಸ್ ಆಗಿರಬೇಕು. ದೈಹಿಕ ಸದೃಢತೆ, ಉತ್ತಮ ನಡವಳಿಕೆ ಮತ್ತು ಸಂವಹನ ಕಲೆಗಳು ಅಗತ್ಯ. ಸ್ಥಳೀಯ ನಿವಾಸಿಗಳಿಗೆ ಆದ್ಯತೆ ನೀಡಲಾಗುತ್ತದೆ. ಅಭ್ಯರ್ಥಿಗಳು ಬೆಳಿಗ್ಗೆ 7ರಿಂದ ಮಧ್ಯಾಹ್ನ 2ರ ವರೆಗೆ ಅಥವಾ ಮಧ್ಯಾಹ್ನ 2ರಿಂದ ರಾತ್ರಿ 8ರ ವರೆಗೆ ಶಿಫ್ಟ್‌ನಲ್ಲಿ ಕೆಲಸ ಮಾಡಲು ಸಿದ್ಧರಾಗಿರಬೇಕು.

Vijayaprabha Mobile App free

ಅಗತ್ಯ ದಾಖಲೆಗಳು

ಆಯ್ಕೆಯಾದ ಅಭ್ಯರ್ಥಿಗಳಿಗೆ 11 ತಿಂಗಳ ಗುತ್ತಿಗೆ ಅವಧಿಯಲ್ಲಿ ಸೇವೆ ನೀಡುವ ಅವಕಾಶ ಸಿಗುತ್ತದೆ. ಕರ್ತವ್ಯ ನಿರ್ವಹಣೆ ತೃಪ್ತಿಕರವಾಗಿದ್ದರೆ ಸೇವೆಯನ್ನು ಮು೦ದುವರಿಸಲು ಅವಕಾಶ ನೀಡಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಬಯೋಡೇಟಾ, ಇತ್ತೀಚಿನ ಭಾವಚಿತ್ರ, ವಿದ್ಯಾರ್ಹತಾ ಪ್ರಮಾಣ ಪತ್ರಗಳು, ಎನ್ಸಿಸಿ ಸರ್ಟಿಫಿಕೇಟ್, ಸೇವಾ ಪ್ರಮಾಣ ಪತ್ರ ಹಾಗೂ ಆಧಾ‌ರ್ ಕಾರ್ಡ್‌ ಸೇರಿದಂತೆ ದಾಖಲೆಗಳನ್ನು ದೃಢೀಕರಿಸಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ

ಆಸಕ್ತ ಅಭ್ಯರ್ಥಿಗಳು ನವೆಂಬರ್ 3ರಿಂದ 10ರೊಳಗೆ ದೇವಿನಗರದ ವಾಲ್ಮೀಕಿ ವೃತ್ತದ ಬಳಿಯ ಸ್ತ್ರೀ ಸೇವಾನಿಕೇತನ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ ಸಂಖ್ಯೆ 7353901862 ಅನ್ನು ಸಂಪರ್ಕಿಸಬಹುದು ಎಂದು ಉಪನಿರ್ದೇಶಕ ರಾಮಕೃಷ್ಣ ನಾಯಕ ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply