ಹಾವೇರಿ: ಗದಗ, ಬೆಳಗಾವಿಯ ಹಿಡಕಲ್ ಡ್ಯಾಂ ನ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ 10 ತಿಂಗಳ ತೋಟಗಾರಿಕೆ ತರಬೇತಿ ನೀಡಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಎಸ್‍ಎಸ್‍ಎಲ್‍ಸಿ ಪಾಸ್ ಆದ ತಂದೆ-ತಾಯಿ ಮತ್ತು ಪೋಷಕರು ಕಡ್ಡಾಯವಾಗಿ ಕೃಷಿ ಜಮೀನು ಹೊಂದಿರುವ ಅಭ್ಯರ್ಥಿಗಳು ಮಾರ್ಚ್ 24ರಿಂದ ಏಪ್ರಿಲ್ 17ರೊಳಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗು ಗರಿಷ್ಟ 33 ಆಗಿರಬೇಕು. ಇನ್ನು ಇತರೆ ವರ್ಗದವರಿಗೆ ಕನಿಷ್ಠ 18 ವರ್ಷ ಹಾಗು ಗರಿಷ್ಟ 30 ಆಗಿರಬೇಕು
ಅಭ್ಯರ್ಥಿಗಳು ಹಾವೇರಿ ಜಿಲ್ಲಾ ತೋಟಗಾರಿಗೆ ಇಲಾಖೆಯ ವೆಬ್ಸೈಟ್‌ನಲ್ಲಿ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ, ಹಿರಿಯ ಸಹಾಯಕ ನಿರ್ದೇಶಕರು ಹಾವೇರಿ ಇವರಿಗೆ ಸಲ್ಲಿಸಬೇಕು.