ಅನುಷ್ಕಾ ಶರ್ಮಾ ‘ಬೇಬಿ ಬಂಪ್’ ಚಿತ್ರ ಪೋಸ್ಟ್; ನನ್ನ ಇಡೀ ಜಗತ್ತು ಒಂದೇ ಫ್ರೇಮ್‌ನಲ್ಲಿದೆ’ ಎಂದ ವಿರಾಟ್ ಕೊಹ್ಲಿ!

ಮುಂಬೈ: ವಿರುಷ್ಕಾ ದಂಪತಿ ಎಂದೇ ಖ್ಯಾತರಾಗಿವ ಬಾಲಿವುಡ್ ನಟಿ ಅನುಷ್ಕಾ ಶರ್ಮ ಮತ್ತು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಮೂರನೇ ವ್ಯಕ್ತಿಯ ಆಗಮನವಾಗುತ್ತಿರುವುದು ಎಲ್ಲರಿಗೂ ತಿಳಿದ ಸುದ್ದಿ. ಈ ಸುದ್ದಿಯನ್ನು…

ಮುಂಬೈ: ವಿರುಷ್ಕಾ ದಂಪತಿ ಎಂದೇ ಖ್ಯಾತರಾಗಿವ ಬಾಲಿವುಡ್ ನಟಿ ಅನುಷ್ಕಾ ಶರ್ಮ ಮತ್ತು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಮೂರನೇ ವ್ಯಕ್ತಿಯ ಆಗಮನವಾಗುತ್ತಿರುವುದು ಎಲ್ಲರಿಗೂ ತಿಳಿದ ಸುದ್ದಿ. ಈ ಸುದ್ದಿಯನ್ನು ಸ್ವತಃ ಅನುಷ್ಕಾ ಶರ್ಮ ಅವರು ತಾನು ಗರ್ಭಿಣಿ ಎಂಬ ಸುದ್ದಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು.

ಈಗ ಅನುಷ್ಕಾ ಶರ್ಮಾ ಹೊಟ್ಟೆಯ ಮೇಲೆ ಕೈ ಹಿಡಿದಿರುವ ‘ಬೇಬಿ ಬಂಪ್’  ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, “ನಿಮ್ಮಲ್ಲಿ ಜೀವನದ ಸೃಷ್ಟಿಯನ್ನು ಅನುಭವಿಸುವುದಕ್ಕಿಂತ ಹೆಚ್ಚು ನೈಜ ಮತ್ತು ವಿನಮ್ರವಾದುದು ಯಾದುದು ಇಲ್ಲ.ಇದು ನಿಮ್ಮ ನಿಯಂತ್ರಣದಲ್ಲಿ ಇಲ್ಲದಿದ್ದರೆ ನಿಜಕ್ಕೂ ಅದೇನು?” ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಇನ್ಸ್ಟಾಗ್ರಾಮ್ ನಲ್ಲಿ ಪತಿ ವಿರಾಟ್ ಕೊಹ್ಲಿ, ‘ನನ್ನ ಇಡೀ ಜಗತ್ತು ಒಂದೇ ಫ್ರೇಮ್‌ನಲ್ಲಿದೆ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Vijayaprabha Mobile App free

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.