ಬೆಂಗಳೂರು: ಅಂತ್ಯೋದಯ ಕಾರ್ಡ್ ಗಳನ್ನೂ ಹೊಂದಿರುವ ಪಡಿತರದಾರರಿಗೆ ನೀಡಲಾಗುತ್ತಿರುವ ಪಡಿತರ ಅಕ್ಕಿಯ ಪ್ರಮಾಣವನ್ನು ಕಡಿತ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಹೌದು, ಅಂತ್ಯೋದಯ ಕಾರ್ಡ್ ಗಳನ್ನೂ ಹೊಂದಿರುವ ಪಡಿತರದಾರರಿಗೆ ನೀಡಲಾಗುತ್ತಿದ್ದ ಪಡಿತರ 35 ಕೆಜಿ ಅಕ್ಕಿಯ ಬದಲಿಗೆ 15 ಕೆಜಿ ಅಕ್ಕಿ ಜೊತೆಗೆ 20 ಕೆಜಿ ರಾಗಿ ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು ಏಪ್ರಿಲ್ 1 ರಿಂದಲೇ ಈ ಹೊಸ ನಿಯಮ ಜಾರಿಗೆ ಬರಲಿದೆ ಎನ್ನಲಾಗಿದ್ದು, ಉತ್ತರ ಕರ್ನಾಟಕದ ಫಲಾನುಭವಿಗಳಿಗೆ 2 ಕೆಜಿ ಜೋಳ ನೀಡುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.



