Wakf Board: ವಕ್ಫ್ ಮಂಡಳಿಯನ್ನೇ ವಿಸರ್ಜಿಸಿದ ಆಂಧ್ರ ಸರ್ಕಾರ

ಹೈದರಾಬಾದ್‌: ದೇಶಾದ್ಯಂತ ವಕ್ಫ್ ಮಂಡಳಿಯ ವಿರುದ್ಧ ಜನರ ಪ್ರತಿಭಟನೆಯ ನಡುವೆಯೇ ಆಂಧ್ರಪ್ರದೇಶ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ‌. ವಕ್ಫ್ ಮಂಡಳಿಯನ್ನೇ ವಿಸರ್ಜಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಇದರನ್ವಯ ವಕ್ಫ್ ಬೋರ್ಡ್ ರಚನೆಯ ಹಿಂದಿನ ಆದೇಶವನ್ನು…

ಹೈದರಾಬಾದ್‌: ದೇಶಾದ್ಯಂತ ವಕ್ಫ್ ಮಂಡಳಿಯ ವಿರುದ್ಧ ಜನರ ಪ್ರತಿಭಟನೆಯ ನಡುವೆಯೇ ಆಂಧ್ರಪ್ರದೇಶ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ‌. ವಕ್ಫ್ ಮಂಡಳಿಯನ್ನೇ ವಿಸರ್ಜಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಇದರನ್ವಯ ವಕ್ಫ್ ಬೋರ್ಡ್ ರಚನೆಯ ಹಿಂದಿನ ಆದೇಶವನ್ನು ಹಿಂಪಡೆದು ಜಿಒ 75ನ್ನು ಹೊರಡಿಸಿದೆ.

ರಾಜ್ಯ ಕಾನೂನು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಎನ್.ಎನ್.ಡಿ.ಫಾರೂಕ್ ಮಾತನಾಡಿ, ಹಿಂದಿನ ಸರ್ಕಾರದ ಆಡಳಿತಾವಧಿಯಲ್ಲಿ ಹೊರಡಿಸಿದ್ದ ಅಲ್ಪಸಂಖ್ಯಾತರ ಕಲ್ಯಾಣ ವಕ್ಫ್ ಮಂಡಳಿಯ ಜಿವಿಒ-47 ಅನ್ನು ರದ್ದುಗೊಳಿಸಿ ಪ್ರಸ್ತುತ ಸಮ್ಮಿಶ್ರ ಸರ್ಕಾರ ಆದೇಶ ಹೊರಡಿಸಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಹಿಂದಿನ ಸರ್ಕಾರದ ಅವಧಿಯಲ್ಲಿ ನೀಡಿದ್ದ ಜಿವಿಒ ರದ್ದುಗೊಳಿಸಿ ಜಿವಿಒ-75 ಹೊರಡಿಸಿರುವುದನ್ನು ಉಲ್ಲೇಖಿಸಲಾಗಿದೆ.

ಕಳೆದ ವರ್ಷ ಅಕ್ಟೋಬರ್ 21 ರಂದು, ವಕ್ಷ ರಚನೆಗೆ ಆಗಿನ ಸರ್ಕಾರವು ನಾಮನಿರ್ದೇಶನ ಮಾಡಿದ ಸದಸ್ಯರ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಸುಪ್ರೀಂ ಕೋರ್ಟ್‌ಗೆ ಕೆಲವರು ಅರ್ಜಿ ಸಲ್ಲಿಸಿದ ನಂತರ ವಕ್ಫ್ ಮಂಡಳಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು.

Vijayaprabha Mobile App free

ವಿವಿಧ ಕಾನೂನು ಸಮಸ್ಯೆಗಳಿಂದ ವಕ್ಫ್ ಮಂಡಳಿಯಲ್ಲಿ ಆಡಳಿತಾತ್ಮಕ ನಿರ್ವಾತ ಉಂಟಾಗಿದ್ದು, ಈ ಸಮಸ್ಯೆ ಬಗೆಹರಿಸಲು ಹಿಂದಿನ ಸರ್ಕಾರ ಹೊರಡಿಸಿದ್ದ ವಿವಾದಾತ್ಮಕ ಜಿವಿಒ ರದ್ದುಪಡಿಸಿ ಸಮ್ಮಿಶ್ರ ಸರ್ಕಾರ ನೂತನ ಜಿವಿಒ ಸಂಖ್ಯೆ 75 ಹೊರಡಿಸಿದೆ ಎಂದು ಸಚಿವ ಫಾರೂಕ್ ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.