National Family Assistance Scheme: ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಯಡಿ(NSAP) ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಕೇಂದ್ರ ಸಹಾಯಧನ ಲಭ್ಯವಿದ್ದು, ಇದರ ಅನ್ವಯ ಬಡತನ ರೇಖೆಗಿಂತ ಕೆಳಗೆ ಇರುವ ಬಿ.ಪಿ.ಎಲ್. ಕಾರ್ಡ್(BPL Card) ಹೊಂದಿದ ಕುಟುಂಬದ ಮುಖ್ಯಸ್ಥನ ಮರಣವಾದಲ್ಲಿ ಒಂದು ಬಾರಿಯ ಸಹಾಯದನವನ್ನು ನೀಡಲಾಗುವುದು.
ಇದನ್ನು ಓದಿ: ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಹೊಸ ಫೋನ್ ಸಂಖ್ಯೆಯನ್ನು ನವೀಕರಿಸುವುದು, ಬದಲಾಯಿಸುವುದು, ಸೇರಿಸುವುದು ಹೇಗೆ
ರಾಷ್ಟ್ರೀಯ ಕುಟುಂಬ ನೆರವು ಯೋಜನೆ 1995 ರಿಂದ ಜಾರಿಗೆ ಬಂದಿದೆ. ಈ ಹಿಂದೆ ಉಪ ವಿಭಾಗಾಧಿಕಾರಿ ಮಂಜೂರಾತಿ ಪ್ರಾಧಿಕಾರವಾಗಿದ್ದು, 2008 ರಿಂದ ತಹಸೀಲ್ದಾರ್ ರವರನ್ನು ಮಂಜೂರಾತಿ ಪ್ರಾಧಿಕಾರವಾಗಿ ಸ.ಆ.ಆ.0.46 ಡಿಎಸ್‌ಪಿ 2008 ರಂತ ನೇಮಿಸಿದೆ.
ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಅರ್ಹರು ಯಾರು, ನಿಬಂಧನೆಗಳೇನು
* ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಬಿ.ಪಿ.ಎಲ್. ಕಾರ್ಡ್ ಹೊಂದಿದ ಕುಟುಂಬಸ್ಥನ (Primary Bread winner) ಮರಣ ಹೊಂದಿದಲ್ಲಿ ಆತನ ಕುಟುಂಬ ಈ ಯೋಜನೆಗೆ ಅರ್ಹರು
* ಮೃತರು 18 ರಿಂದ 59 ವರ್ಷದೊಳಿನವರಾಗಿರಬೇಕು.
* ಮರಣ ಹೊಂದಿದ ಆರು ತಿಂಗಳ ಒಳಗಾಗಿ ಅರ್ಜಿಸಲ್ಲಿಸಬೇಕು.
* ಮರಣ ಪ್ರಮಾಣ ಪತ್ರ ಹಾಜರುಪಡಿಸಬೇಕು. ನಂತರ ರೂ. 20,000/- ಗಳ ನೆರವು ನೀಡಲಾಗುವುದು,
ಇದನ್ನು ಓದಿ: ಯುವಶಕ್ತಿ ಯೋಜನೆಗೆ ಇಂದು ಸಿಎಂ ಚಾಲನೆ: ಈ ಯೋಜನೆಯಡಿ 10 ಸಾವಿರ ರೂ ನಿಧಿ, 5 ಲಕ್ಷ ಸಾಲಕ್ಕೆ,1 ಲಕ್ಷ ಸಬ್ಸಿಡಿ
ನೆಮ್ಮದಿ ಕೇಂದ್ರ ಅಥವಾ ನಾಡಕಛೇರಿಯಲ್ಲಿ ಅರ್ಜಿ ಸಲ್ಲಿಸಿ
* ರಾಷ್ಟ್ರೀಯ ಕುಟುಂಬ ನೆರವು ಯೋಜನೆಗೆ ಸಂಬಂಧ ಪಟ್ಟ ನೆಮ್ಮದಿ ಕೇಂದ್ರ ಅಥವಾ ನಾಡಕಛೇರಿಯಲ್ಲಿ ಅರ್ಜಿ ಸಲ್ಲಿಸಬೇಕು
* ಒಂದು ವೇಳೆ ಆ ಕುಟುಂಬದಲ್ಲಿ ದುಡಿಯುವ ವ್ಯಕ್ತಿಗಳಿದ್ದರೆ ಆ ಅರ್ಜಿ ತಿರಸ್ಕರಿಸಲಾಗುವುದು.
* ಪಲಾನುಭವಿಗಳು ಮರಣ ಹೊಂದಿದಲ್ಲಿ ಅವರ ಮಕ್ಕಳಿಗೆ ನೆರವನ್ನು ನೀಡಬಹುದು
ಇದನ್ನು ಓದಿ: ಮಾರ್ಚ್ 31 ಡೆಡ್ ಲೈನ್: ಈ ರೀತಿ ಮಾಡಿದರೆ 10,000 ರೂ ದಂಡ; ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೇ, ಹೀಗೆ ಪರಿಶೀಲಿಸಿ
ಈ ಯೋಜನೆಗೆ ಸಲ್ಲಿಸಬೇಕಾದ ದಾಖಲಾತಿಯ ವಿವರ ಕೆಳಕಂಡಂತಿದೆ.
1) ವಾಸಸ್ಥಳ ಪ್ರಮಾಣ ಪತ್ರ
2) ಮರಣ ಪ್ರಮಾಣ ಪತ್ರ
3) ಪಡಿತರ ಚೀಟಿ
ಇದನ್ನು ಓದಿ: ಖ್ಯಾತ ನಟಿ ಪವಿತ್ರಾ ಲೋಕೇಶ್, ನರೇಶ್ ಲವ್ವಿಡವ್ವಿ, ಮದುವೆ, ಹನಿಮೂನ್ ಬಣ್ಣ ಬಯಲು; ಇದಕ್ಕಾಗಿ ಇಷ್ಟೆಲ್ಲಾ ಮಾಡಿದ್ರಾ..?