ನೀವು ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಲು ಬಯಸುತ್ತಿದ್ದೀರಾ? ಅದರಲ್ಲಿ ಎಲ್ಐಸಿ ಪಾಲಿಸಿಯನ್ನು ಪಡೆಯುವ ಬಗ್ಗೆ ಯೋಚಿಸುತ್ತಿದ್ದೀರಾ? ಅಗಾದರೆ, ಮಾರುಕಟ್ಟೆಯಲ್ಲಿ ಅನೇಕ ಪಾಲಿಸಿಗಳು ಲಭ್ಯವಿದೆ. ಯಾವ ಪಾಲಿಸಿಯನ್ನು ತೆಗೆದುಕೊಳ್ಳಬೇಕೆಂದು ಅರ್ಥವಾಗುತ್ತಿಲ್ಲವೇ? ಅಗಾದರೆ ಈ ಪಾಲಿಸಿಯನ್ನು ಪ್ರಯತ್ನಿಸಿ.
ಎಲ್ಐಸಿ ಜೀವನ್ ಆನಂದ್ ಹೆಸರಿನಲ್ಲಿ ಪಾಲಿಸಿಯನ್ನು ನೀಡುತ್ತಿದೆ. ನೀವು ಈ ಪಾಲಿಸಿಯನ್ನು ತೆಗೆದುಕೊಂಡರೆ, ನೀವು ದಿನಕ್ಕೆ 74 ರೂಗಳನ್ನು ಉಳಿಸಿದರೆ, 10 ಲಕ್ಷ ರೂ. ಪಡೆಯಬಹುದು. ನೀವು 18 ರಿಂದ 55 ವರ್ಷ ವಯಸ್ಸಿನವರಾಗಿದ್ದರೆ ನೀವು ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು. ಈ ಪಾಲಿಸಿಯು 15 ರಿಂದ 35 ವರ್ಷಗಳ ಅವಧಿಗೆ ಲಭ್ಯವಿದೆ.
18 ವರ್ಷ ವಯಸ್ಸಿನವರು 20 ವರ್ಷಗಳ ಅವಧಿಗೆ 5 ಲಕ್ಷ ರೂ.ಗಳ ವಿಮಾ ರಕ್ಷಣೆಯೊಂದಿಗೆ ಪಾಲಿಸಿಯನ್ನು ತೆಗೆದುಕೊಂಡರೆ, ಅವರು ತಿಂಗಳಿಗೆ 2265 ರೂ.ಗಳ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅಂದರೆ ದಿನಕ್ಕೆ 75 ರೂ ಉಳಿತಾಯ ಮಾಡಿದರೆ ಸಾಕು. ಮುಕ್ತಾಯದ ಸಮಯಕ್ಕೆ 10 ಲಕ್ಷ ರೂ. ಸಿಗುತ್ತದೆ.
ಪಾಲಿಸಿ ಹಣ 5 ಲಕ್ಷ ರೂ.ಗಳ ಹೊರತಾಗಿ ಬೋನಸ್ ಕೂಡ ಸಿಗುತ್ತದೆ. ಬೋನಸ್ 4.5 ಲಕ್ಷ ರೂ.ವರೆಗೂ ಬರಬಹುದು. ಇನ್ನು ಎಫ್ಎಬಿ ಅಡಿಯಲ್ಲಿ ಸುಮಾರು 35,000 ರೂ. ಪಡೆಯಬಹುದು. ಒಟ್ಟು 10 ಲಕ್ಷ ರೂ.ವರೆಗೆ ಪಾಲಿಸಿದಾರರಿಗೆ ಪಾಳಿಸಿ ಹಣ ಬರುತ್ತದೆ. ಒಂದು ವೇಳೆ ಪಾಲಿಸಿ ಅವಧಿಯಲ್ಲಿ ಪಾಲಿಸಿದಾರರು ಸತ್ತರೆ, ನಾಮಿನಿ ಪಾಲಿಸಿ ಹಣವನ್ನು ಸ್ವೀಕರಿಸಬಹುದು.