ವಿಜಯನಗರ: ಅಲಿಬಾಬಾ (ನಗರಸಭೆ ಮಾಜಿ ಸದಸ್ಯ ಡಿ.ವೇಣುಗೋಪಾಲ್) ಮತ್ತು ಅವರ ಜತೆಗಿರುವ 40 ಜನ ಕಳ್ಳರು ವಿಜಯನಗರದಲ್ಲಿ ಎಲ್ಲೆಂದರಲ್ಲಿ ಭೂ ಕಬಳಿಕೆ ಮಾಡುತ್ತಿದ್ದಾರೆ. ಅದಕ್ಕಾಗಿ ಅಮಾಯಕರನ್ನು ಬೆದರಿಸುತ್ತಿದ್ದಾರೆʼ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಆರೋಪಿಸಿದ್ದಾರೆ.
ಹೌದು, ಡಿ.ವೇಣುಗೋಪಾಲ್ ಭೂಗಳ್ಳರ ʻಗ್ಯಾಂಗ್ ಲೀಡರ್ʼ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಆಗ್ರಹಿಸಲಾಗುವುದುʼ ಎಂದು ಸಚಿವ ಆನಂದ್ ಸಿಂಗ್ ಅವರು ಹೇಳಿದ್ದಾರೆ.
ʻಮೋಸದಿಂದ ಸರ್ಕಾರಿ ಸ್ವತ್ತು ಮಾರಾಟʼ
ಇನ್ನು, ಅಲಿಬಾಬಾ (ಡಿ.ವೇಣುಗೋಪಾಲ್) ಹಾಗೂ ಆತನ ಪತ್ನಿ ಸೇರಿ, ಸರ್ಕಾರಿ ಸ್ವತ್ತನ್ನು ಮೋಸದಿಂದ ಮಾರಾಟ ಮಾಡಿ 16.28 ಲಕ್ಷ ವಂಚಿಸಿದ್ದು, ಕೇಸ್ ದಾಖಲಾಗಿದೆʼ ಎಂದು ಆನಂದ್ ಸಿಂಗ್ ಹೇಳಿದ್ದಾರೆ.
ಅಲ್ಲದೆ, ಈಗ ಹಂಪಿ ರಸ್ತೆಯಲ್ಲಿ ಮಡಿವಾಳ ಸಮಾಜಕ್ಕೆ ಸೇರಿದ 1.05 ಎಕರೆ ಜಮೀನು ಕಬಳಿಸಲು ಹುನ್ನಾರ ನಡೆಸಿದ್ದು, ಡಿ.ಪೋಲಪ್ಪನೊಂದಿಗೆ ಸೇರಿ ನಕಲಿ ವಿಲ್ ಸೃಷ್ಟಿಸಿ, ಹದ್ದುಬಸ್ತಿಗೆ ಮನವಿ ಸಲ್ಲಿಸಿದ್ದರು. ತಹಶೀಲ್ದಾರ್ ದಾಖಲೆ ಪರಿಶೀಲಿಸಿ ಮನವಿ ತಿರಸ್ಕರಿಸಿದ್ದಾರೆʼ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.