ಕಾಬುಲ್: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸಮನ್ ಆಗಿದ್ದ ನಜೀಬ್ ತರಕಾಯ್ ಅವರು ಇಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ವಾರ ಜಲಾಲಾಬಾದ್‌ನ ಪೂರ್ವ ನಂಗ್ರಾಹಾರ್‌ನಲ್ಲಿ ರಸ್ತೆ ದಾಟುತ್ತಿದ್ದಾಗ ನಜೀಬ್ ತರ್ಕಾರಿ ಅವರಿಗೆ ಕಾರು ಡಿಕ್ಕಿ ಹೊಡೆದಿತ್ತು, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಅವರು ಕೋಮಾ ಸ್ಥಿತಿಗೆ ಹೋಗಿದ್ದರು. ಪರಿಸ್ಥಿತಿ ಹದಗೆಟ್ಟ ಕಾರಣ ಇಂದು ನಜೀಬ್ ತರಕಾಯ್ ಅವರು ಸಾವನ್ನಪ್ಪಿದ್ದಾರೆ.
ಬ್ಯಾಟ್ಸ್‌ಮನ್ ನಜೀಬ್ ತರಕಾಯ್ ಸಾವನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಟ್ವಿಟರ್ ಮೂಲಕ ಬಹಿರಂಗಪಡಿಸಿದೆ. ರಸ್ತೆ ಅಪಘಾತದಲ್ಲಿ ಯುವ ಕ್ರಿಕೆಟಿಗನ ಸಾವು ಆಘಾತಕಾರಿಯಾಗಿದೆ ಎಂದು ಆರಂಭಿಕ ಬ್ಯಾಟ್ಸ್‌ಮನ್ ನಜೀಬ್ ತರಕಾಯ್ (29) ಅವರ ನಿಧನಕ್ಕೆ ಅಫಘಾನ್ ಕ್ರಿಕೆಟ್ ಮಂಡಳಿ ಸಂತಾಪ ವ್ಯಕ್ತಪಡಿಸಿದೆ.
ನಜೀಬ್ ಅವರು 2014 ರ ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ನಜೀಬ್ ತರಕಾಯ್ ಅಫ್ಘಾನಿಸ್ತಾನ ಪರ ಒಟ್ಟು 13 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು ಅದರಲ್ಲಿ 12 ಟಿ 20 ಪಂದ್ಯ ಮತ್ತು 1 ಏಕದಿನ ಪಂದ್ಯ ಸೇರಿದೆ. ಗ್ರೇಟರ್ ನೋಯ್ಡಾದಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ 90 ರನ್ ಗಳಿಸಿದ್ದು ನಜೀಬ್ ತರ್ಕಾರಿ ಅವರ ವಯಕ್ತಿಕ ಗರಿಷ್ಟ ಮೊತ್ತವಾಗಿದೆ.
ಇದನ್ನು ಓದಿ: ಸ್ಟೋನಿಸ್ ಅಬ್ಬರ, ರಬಾಡ ಮ್ಯಾಜಿಕ್; ಡೆಲ್ಲಿ ವಿರುದ್ಧ ಆರ್ ಸಿಬಿಗೆ 59 ರನ್ ಗಳ ಹೀನಾಯ ಸೋಲು