ಬೆಂಗಳೂರು: ʻಏರೋ ಇಂಡಿಯಾ-2025ʼರ 15ನೇ ಆವೃತ್ತಿಯು 2025ರ ಫೆಬ್ರವರಿ 10 ರಿಂದ 14ರವರೆಗೆ ಬೆಂಗಳೂರಿನ ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ನಡೆಯಲಿದೆ.
ವೈಮಾನಿಕ ಪ್ರದರ್ಶನಕ್ಕೆ ಭೇಟಿ ನೀಡಲು ಬಯಸುವ ಮಾಧ್ಯಮ ಮಿತ್ರರಿಗೆ ನೋಂದಣಿ ಆರಂಭವಾಗಿದ್ದು, ʻಏರೋ ಇಂಡಿಯಾ-2025 ವೆಬ್ಸೈಟ್ ಮೂಲಕವೇ ನೋಂದಣಿ ಮಾಡಲು ಅವಕಾಶವಿದೆ.
ಈ ಕಾರ್ಯಕ್ರಮವನ್ನು ವರದಿ ಮಾಡಲು ಬಯಸುವ ವಿದೇಶಿ ಪತ್ರಕರ್ತರು ಮಾನ್ಯತೆಯುಳ್ಳ ‘ಜೆ ವೀಸಾ’ ಹೊಂದಿರಬೇಕು. ನೋಂದಣಿ 05 ಜನವರಿ 2025 ರಂದು ಕೊನೆಗೊಳ್ಳುತ್ತದೆ.
ನೋಂದಾಯಿಸಲು ಬಯಸುವವರು ಈ ಕೆಳಗಿನವುಗಳನ್ನು ಹೊಂದಿರಬೇಕು:-
(i) ಮಾನ್ಯವಾದ ಮಾಧ್ಯಮ ಗುರುತಿನ ಚೀಟಿ ಸಂಖ್ಯೆ, ಪಿಐಬಿ / ರಾಜ್ಯ ಮಾನ್ಯತೆ ಕಾರ್ಡ್ ಸಂಖ್ಯೆ. ಮಾನ್ಯತೆ ಪಡೆದಿಲ್ಲವಾದರೆ, ಸರ್ಕಾರದ ಯಾವುದಾದರೂ ಫೋಟೋ ಸಮೇತ ಗುರುತಿನ ಚೀಟಿಯ ಸಂಖ್ಯೆಯನ್ನು. (≤ 1 MB)
(ii) ಸ್ವಯಂ ಭಾವಚಿತ್ರ. (≤ 512 Kb.)
ಐದು ದಿನಗಳ ಈ ಕಾರ್ಯಕ್ರಮದಲ್ಲಿ ಮೊದಲ ಮೂರು ದಿನಗಳು ವ್ಯವಹಾರ ದಿನಗಳಾಗಿದ್ದು, ʻಏರೋಸ್ಪೇಸ್ʼ ಮತ್ತು ರಕ್ಷಣಾ ಕ್ಷೇತ್ರದ ಪ್ರಮುಖ ವ್ಯಾಪಾರ ಪ್ರದರ್ಶನ ಮತ್ತು ಭಾರತೀಯ ವಾಯುಪಡೆ ಹಾಗೂ ಇತರ ಭಾಗೀದಾರರ ವೈಮಾನಿಕ ಪ್ರದರ್ಶನಗಳನ್ನು ಒಳಗೊಂಡಿರಲಿದೆ. ʻಏರೋಸ್ಪೇಸ್ʼ ಉದ್ಯಮದ ಜಾಗತಿಕ ನಾಯಕರು ಮತ್ತು ದೊಡ್ಡ ಸಂಸ್ಥೆಗಳಲ್ಲದೆ, ವಿಶ್ವದಾದ್ಯಂತದ ಚಿಂತಕರು ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.
ಮಾಹಿತಿ, ಕಲ್ಪನೆಗಳು ಮತ್ತು ವಾಯುಯಾನ ಉದ್ಯಮದಲ್ಲಿನ ಹೊಸ ಬೆಳವಣಿಗೆಗಳ ವಿನಿಮಯಕ್ಕೆ ʻಏರೋ ಇಂಡಿಯಾʼ ಒಂದು ಅನನ್ಯ ಅವಕಾಶವನ್ನು ಒದಗಿಸುತ್ತದೆ. ದೇಶೀಯ ವಾಯುಯಾನ ಉದ್ಯಮಕ್ಕೆ ಉತ್ತೇಜನ ನೀಡುವುದರ ಜೊತೆಗೆ, ಇದು ʻಮೇಕ್ ಇನ್ ಇಂಡಿಯಾʼದ ಉದ್ದೇಶವನ್ನು ಮತ್ತಷ್ಟು ಬಲಪಡಿಸುತ್ತದೆ.
ʻಏರೋ ಇಂಡಿಯಾ-2023ʼರಲ್ಲಿ 27ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಮತ್ತು 809ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ್ದರು.
ರಿಜಿಸ್ಟ್ರೇಷನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ: (www.aeroindia.gov.in > Registration > Media Registration link https://www.aeroindia.gov.in/registration/media-authentication-form)