ಹಿಂಡೆನ್ಬರ್ಗ್ ರಿಸರ್ಚ್‌ನ ಆರೋಪಗಳನ್ನು ನಿರಾಕರಿಸಿದ ಅದಾನಿ ಗ್ರೂಪ್

ನವದೆಹಲಿ: ಇತ್ತೀಚಿನ ಹಿಂಡೆನ್ಬರ್ಗ್ ರಿಸರ್ಚ್‌ನ ಆರೋಪಗಳಿಗೆ ಅದಾನಿ ಗ್ರೂಪ್ ಭಾನುವಾರ ಯುಎಸ್ ಶಾರ್ಟ್ ಸೆಲ್ಲರ್ ಸಂಸ್ಥೆಯ ವರದಿಗಳನ್ನು ತಳ್ಳಿ ಹಾಕಿದೆ. ಅದಾನಿ ಸಮೂಹದ ಷೇರು ಅಕ್ರಮಕ್ಕೆ ಸಂಬಂಧಿಸಿದ ಸಾಗರೋತ್ತರ ಕಂಪೆನಿಗಳಲ್ಲಿ ಸೆಬಿ ಮುಖ್ಯಸ್ಥೆ ಮಾಧವಿ ಬುಚ್…

ನವದೆಹಲಿ: ಇತ್ತೀಚಿನ ಹಿಂಡೆನ್ಬರ್ಗ್ ರಿಸರ್ಚ್‌ನ ಆರೋಪಗಳಿಗೆ ಅದಾನಿ ಗ್ರೂಪ್ ಭಾನುವಾರ ಯುಎಸ್ ಶಾರ್ಟ್ ಸೆಲ್ಲರ್ ಸಂಸ್ಥೆಯ ವರದಿಗಳನ್ನು ತಳ್ಳಿ ಹಾಕಿದೆ.

ಅದಾನಿ ಸಮೂಹದ ಷೇರು ಅಕ್ರಮಕ್ಕೆ ಸಂಬಂಧಿಸಿದ ಸಾಗರೋತ್ತರ ಕಂಪೆನಿಗಳಲ್ಲಿ ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ಹಾಗೂ ಅವರ ಪತಿ ಪಾಲು ಹೊಂದಿದ್ದಾರೆ ಎಂಬ ಮಾಹಿತಿಯನ್ನು ಅಮೆರಿಕದ ಶಾರ್ಟ್‌ಸೆಲ್ಲರ್ ಸಂಸ್ಥೆ ಹಿಂಡನ್ಬರ್ಗ್‌ರಿಸರ್ಚ್‌ ಬಹಿರಂಗಪಡಿಸಿದೆ.

ಶನಿವಾರ ರಾತ್ರಿ ಈ ಕುರಿತು 106 ಪುಟಗಳ ವರದಿ ಬಿಡುಗಡೆ ಮಾಡಿರುವ ಹಿಂಡನ್ಬರ್ಗ್‌, ಅದಾನಿಯ ಬೇನಾಮಿ ಕಂಪೆನಿಗಳಲ್ಲಿ ತಾವೇ ಷೇರುಗಳನ್ನು ಹೊಂದಿರುವ ಕಾರಣಕ್ಕೆ ಸೆಬಿ ಮುಖ್ಯಸ್ಥೆಯಾಗಿರುವ ಮಾಧವಿ ಬುಚ್, ಅದಾನಿ ಗ್ರೂಪ್ ವಿರುದ್ಧದ ಷೇರು ಅವ್ಯವಹಾರ ಕುರಿತು ಸರಿಯಾಗಿ ತನಿಖೆ ಮಾಡಿಲ್ಲ ಎಂದು ಆಪಾದಿಸಿದೆ.

Vijayaprabha Mobile App free

ಹಿಂಡನ್ಬರ್ಗ್‌ವರದಿಯ ಪ್ರಕಾರ, ಮಾಧವಿ ಬುಚ್ ಮತ್ತು ಅವರ ಪತಿ ಬರ್ಮುಡಾ ಮತ್ತು ಮಾರಿಷಸ್ನಲ್ಲಿರುವ ನಕಲಿ ಕಂಪೆನಿಗಳಲ್ಲಿ ಹೂಡಿಕೆಗಳನ್ನು ಹೊಂದಿದ್ದಾರೆ.
ಇದೀಗ ಅದಾನಿ ಸಮೂಹವು ಕಂಪನಿಯ ವಿರುದ್ಧದ ಈ ಆರೋಪಗಳನ್ನು ತಿರಸ್ಕರಿಸಿದೆ. ಅದರ ಸಾಗರೋತ್ತರ ಹೋಲ್ಡಿಂಗ್ ರಚನೆಯು ಸಂಪೂರ್ಣವಾಗಿ ಪಾರದರ್ಶಕವಾಗಿದೆ ಎಂದು ಪುನರುಚ್ಚರಿಸಿದೆ.

ನಾವು ಅದಾನಿ ಗ್ರೂಪ್ ವಿರುದ್ಧದ ಈ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ, ಇವುಗಳನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗಿದೆ, ಆಧಾರರಹಿತವೆಂದು ಸಾಬೀತುಪಡಿಸಲಾಗಿದೆ ಮತ್ತು ಜನವರಿ 2024 ರಲ್ಲಿ ಗೌರವಾನ್ವಿತ ಸುಪ್ರೀಂ ಕೋರ್ಟ್ ಈಗಾಗಲೇ ವಜಾಗೊಳಿಸಿದೆ ಎಂದು ಅದಾನಿ ಗ್ರೂಪ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.