ಮುಂಬೈ: ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಬಂಧಿತ ಉದ್ಯಮಿ ಮತ್ತು ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಮುಂಬೈ ನ್ಯಾಯಾಲಯವು ಸೋಮವಾರ ಜಾಮೀನು ನೀಡಿದೆ.
ಹೌದು, ಕಳೆದೆರಡು ದಿನಗಳ ಹಿಂದೆ ರಾಜ್ ಕುಂದ್ರಾ ಪರ ವಕೀಲರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಕೋರ್ಟ್, ₹50 ಸಾವಿರ ಮೌಲ್ಯದ ಬಾಂಡ್ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದೆ. ಪಾರ್ನ್ ಸಿನಿಮಾ ನಿರ್ಮಾಣ ಮತ್ತು ಆಪ್ ಗಳಲ್ಲಿ ಪಾರ್ನ್ ಸ್ಟ್ರೀಮಿಂಗ್ ಪ್ರಕರಣದಲ್ಲಿ ರಾಜ್ ಕುಂದ್ರಾಗೆ ಜುಲೈನಲ್ಲಿ ಬಂಧಿಸಲಾಗಿತ್ತು.
ಇನ್ನು, ರಾಜ್ ಕುಂದ್ರಾ ಜೊತೆ ಬಂಧನಕ್ಕೊಳಗಾಗಿದ್ದ ಇನ್ನೊಬ್ಬ ಆರೋಪಿ ರ್ಯಾನ್ ತೋರ್ಪೆಗೂ ಜಾಮೀನು ನೀಡಲಾಗಿದ್ದು, ಬಂಧನವಾಗಿ ಎರಡು ತಿಂಗಳ ಬಳಿಕ ರಾಜ್ ಕುಂದ್ರಾಗೆ ಜಾಮೀನು ಸಿಕ್ಕಿದ್ದು, ಶೀಘ್ರವೇ ಅವರು ಜೈಲಿನಿಂದ ಹೊರ ಬರಲಿದ್ದಾರೆ.