ಬೆಂಗಳೂರು : ಕಿರಿಕ್ ಪಾರ್ಟಿ ಸಿನಿಮಾ ಖ್ಯಾತಿಯ “ಸಾನ್ವಿ” ಅಂತಲೇ ಪರಿಚಿತರಾಗಿರುವ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿ ಕಿರಿಕ್ ಪಾರ್ಟಿ, ಅಂಜನಿ ಪುತ್ರ, ಚಮಕ್, ಯಜಮಾನ ಮತ್ತು ತೆಲುಗಿನಲ್ಲಿ ಗೀತಾ ಗೋವಿಂದಂ, ಸರಿಲೆಕು ನಿಕೆವ್ವರು ಮತ್ತು ಬಿಷ್ಮಾ ಗಳಂತಹ ಯಶಸ್ವಿ ಸಿನಿಮಾಗಳನ್ನು ನೀಡಿ ದಕ್ಷಿಣ ಭಾರತದ ಅಗ್ರ ಶ್ರೇಯಾಂಕಿತ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ.
ಸದ್ಯ ಬಾರಿ ಸದ್ದು ಮಾಡುತ್ತಿರುವ ಕನ್ನಡದ ದ್ರುವ ಸರ್ಜಾ ಅಭಿನಯದ ಪೊಗರು ಮತ್ತು ತೆಲುಗಿನ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಕನಸಿನ ರಾಣಿಯಾಗಿರುವ ರಶ್ಮಿಕಾ ಮಂದಣ್ಣ ಅವರನ್ನು ಮದುವೆಯಾಗಲು ಯುವಕರಿಗೆ ಅವಕಾಶ ಸಿಕ್ಕರೆ ಹೇಗಿರುತ್ತದೆ? ಆ ಅವಕಾಶವನ್ನು ಪಡೆಯಲು ಏನು ಮಾಡಬೇಕು? ಅಂದುಕೊಳ್ಳುತ್ತಿದ್ದೀರಾ ?
ಸದ್ಯ ಸಂಗತಿ ನಡೆದಿದ್ದು ರಶ್ಮಿಕಾ ಮಂದಣ್ಣ ಅವರನ್ನು ಯುವಕನೊಬ್ಬ “ನಾನು ನಿನ್ನನ್ನು ಮದುವೆ ಆಗಬೇಕೆಂದುಕೊಂಡಿದ್ದೇನೆ” ಎಂದು ಸೋಷಿಯಲ್ ಮೀಡಿಯಾ ಮೂಲಕ ಪ್ರಪೋಸ್ ಮಾಡಿದ್ದಾನೆ.
ಇದಕ್ಕೆ ನಟಿ ರಶ್ಮಿಕಾ ಮಂದಣ್ಣ ಸಮಾಧಾನವಾಗಿ ಉತ್ತರಿಸಿದ್ದು, ನನ್ನ ಮದುವೆಯಾಗಲು ಬಯಸಿದರೆ ಏನು ಮಾಡಬೇಕೆಂದು ಅಭಿಮಾನಿಯೊಬ್ಬರು ನನ್ನನ್ನು ಕೇಳಿದರು. ಅದು ಅಗಬೆಂದರೆ “ನೀವು ಮೊದಲು ನನ್ನನ್ನು ಭೇಟಿಯಾಗಬೇಕು. ನಂತರ ಏನು ಮಾಡಬೇಕೆಂದು ನಾನು ಹೇಳುತ್ತೇನೆ. ನನ್ನನ್ನು ಹೇಗೆ ಭೇಟಿ ಮಾಡಬೇಕೆಂದು ನನ್ನ ತಂಡವನ್ನು ಕೇಳಿ” ಎಂದು ರಶ್ಮಿಕಾ ಶಾಂತ ಸ್ವಭಾವದಿಂದ ಉತ್ತರಿಸಿದ್ದಾಳೆ. ಅವಳ ಉತ್ತರದಿಂದ ಅಭಿಮಾನಿಗಳು ಫಿದಾ ಆಗಿದ್ದಾರೆ.




