ಮುಂಬೈ : ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಖ್ಯಾತ ನಟಿ, ಕನ್ನಡದ ದೀಪಿಕಾ ಪಡುಕೋಣೆ ಅವರ ಕೇಳಿಬಂದಿದೆ.
ಬಾಲಿವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ನಟಿ ದೀಪಿಕಾ ಪಡುಕೋಣೆ ಹೆಸರು ತಳುಕು ಹಾಕಿಕೊಳ್ಳುತ್ತಿರುವಂತೆಯೇ ನಟಿ ಕಂಗನಾ ರಣಾವತ್ ಪ್ರತಿಕ್ರಿಯೆ ನೀಡಿದ್ದಾರೆ.
ಡ್ರಗ್ಸ್ ಚಟದ ಪರಿಣಾಮವೇ ಡಿಪ್ರೆಷನ್, ಸೋ ಕಾಲ್ಡ್ ಹೈ ಸೊಸೈಟಿಯ ಶ್ರೀಮಂತ ಸ್ಟಾರ್ ಪುತ್ರಿ ತನ್ನನ್ನು ತಾನೇ ಕ್ಲಾಸ್ ಎಂದು ಹೇಳಿಕೊಂಡು, ಒಳ್ಳೆಯ ರೀತಿಯಲ್ಲಿ ಬೆಳೆದಿದ್ದೇನೆ ಎಂದು ಕೊಂಡಿರುವವಳು ಆಕೆಯ ಮ್ಯಾನೇಜರ್ ಬಳಿ ಮಾಲ್ ಬೈ ಕ್ಯಾ? ಕೇಳುತ್ತಾಳೆ ಎಂದು ಕಂಗನಾ ದೀಪಿಕಾರನ್ನು ಟೀಕೆ ಮಾಡಿದ್ದಾರೆ.
ಇತ್ತೀಚಿಗೆ ಕನ್ನಡದ ಸ್ಯಾಂಡಲ್ ವುಡ್ ಕ್ವೀನ್, ಮಾಜಿ ಸಂಸದೆ ರಮ್ಯಾ ಅವರು ಡ್ರಗ್ಸ್ ವಿಚಾರಕ್ಕೆ ಸಂಬಂಸಿದಂತೆ ನಟಿ ಕಂಗನಾ ರಣಾವತ್ ಅವರಿಗೆ ನಟಿ ದೀಪಿಕಾ ಪಡುಕೋಣೆ ಅವರನ್ನು ನೋಡಿ ಕಲಿಯಿರಿ ಎಂದು ಟ್ವೀಟ್ ಮಾಡಿದ್ದರು. ಈಗ ಡ್ರಗ್ಸ್ ಡ್ರಗ್ಸ್ ಪ್ರಕರಣದಲ್ಲಿ ದೀಪಿಕಾ ಪಡುಕೋಣೆ ಅವರ ಹೆಸರು ಕೇಳಿಬರುತ್ತಿದ್ದಂತೆ ನಟಿ ಕಂಗನಾ ರಣಾವತ್ ಟ್ವೀಟ್ ಮಾಡಿ ಟೀಕಿಸಿದ್ದಾರೆ.
Repeat after me, depression is a consequence of drug abuse. So called high society rich star children who claim to be classy and have a good upbringing ask their manager ,” MAAL HAI KYA?” #boycottBollywoodDruggies #DeepikaPadukone https://t.co/o9OZ7dUsfG
— Kangana Ranaut (@KanganaTeam) September 21, 2020