ಮುಂಬೈ: ಸೌತ್ ನ ಬೆಡಗಿ ನಟಿ ಸಮಂತಾ ‘ಸಿಟಾಡೆಲ್’ ಬಳಿಕ ಮತ್ತೊಂದು ಬಾಲಿವುಡ್ ಪ್ರಾಜೆಕ್ಟ್ ಅನ್ನು ಒಪ್ಪಿಕೊಂಡಿದ್ದು, ನಟ ಆದಿತ್ಯಾ ರಾಯ್ ಕಪೂರ್ ಜೊತೆಗೆ ನಟಿಸಲು ತಯಾರಾಗಿದ್ದಾರೆ.
ವಿಜಯ್ ದೇವರಕೊಂಡ ಜೊತೆಗಿನ ‘ಖುಷಿ’ ಸಿನಿಮಾದ ರಿಲೀಸ್ ಆದ ಬಳಿಕ, ಅವರು ನಟಿಸುತ್ತಿದ್ದ ‘ಸಿಟಾಡೆಲ್ ಹನಿ ಬನಿ’ ವೆಬ್ ಸರಣಿ ಇದೇ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಇದೀಗ ‘ಸಿಟಾಡೆಲ್’ ಬಳಿಕ ಸಮಂತಾ ‘ರಕ್ತ ಬ್ರಹ್ಮಾಂಡ್’ ಎಂಬ ಹೊಸ ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ.
‘ರಕ್ತ ಬ್ರಹ್ಮಾಂಡ್’ ಎಂಬ ಈ ಹೊಸ ವೆಬ್ ಸರಣಿಯನ್ನು ರಾಜ್ ಮತ್ತು ಡಿಕೆ ನಿರ್ಮಾಣ ಮಾಡುತ್ತಿದ್ದು, ರಾಹಿ ಅನಿಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇವರೊಂದಿಗೆ ಆದಿತ್ಯಾ ರಾಯ್ ಕಪೂರ್, ವಮಿಕಾ ಗಬ್ಬಿ, ಅಲಿ ಫಜಲ್ ಕೂಡ ನಟಿಸುತ್ತಿದ್ದಾರೆ. ಇನ್ನು ಮೊದಲ ಬಾರಿಗೆ ಆದಿತ್ಯಾ ರಾಯ್ ಕಪೂರ್ ಮತ್ತು ಸಮಂತಾ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಇವರಿಬ್ಬರ ಜೋಡಿಯ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment