ನವದೆಹಲಿ : ಮೊಬೈಲ್ ಕಾಲರ್ ಟ್ಯೂನ್ ಮೂಲಕ ಕರೋನ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಬಾಲಿವುಡ್ ಬಿಗ್ ಬಿ ನಟ ಅಮಿತಾಬ್ ಬಚ್ಚನ್ ಅವರ ದ್ವನಿಯನ್ನು ತೆಗೆದು ಹಾಕಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಅರ್ಜಿಯಲ್ಲಿ ಸ್ವತಃ ನಟ ಅಮಿತಾಬ್ ಬಚ್ಚನ್ ಮತ್ತು ಅವರ ಕುಟುಂಬದವರು ಕರೋನ ಸೋಂಕಿಗೆ ಒಳಗಾಗಿದ್ದು,ಅವರು ಈ ದ್ವನಿಯನ್ನು ನೀಡಲಿ ಅರ್ಹರಲ್ಲ ಎಂದು ತಿಳಿಸಿದ್ದು , ಅರ್ಜಿಯಲ್ಲಿ ನಟ ಅಮಿತಾಬ್ ಬಚ್ಚನ್ ವಿರುದ್ದದ ಈ ಹಿಂದಿನ ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ. ಸಮಾಜ ಸೇವೆ ಮೂಲಕ ಯಾವುದೇ ಕೊಡುಗೆ ನೀಡದ ಬಿಗ್ ಬಿ ಅಮಿತಾಬ್ ಬಚ್ಚನ್ ಈ ಸೇವೆಗಾಗಿ ಕೂಡ ಸಂಭಾವನೆ ಪಡೆಯುತ್ತಿದ್ದು, ಇಂತಹ ಸೇವೆಗೆ ಅವರು ಸೂಕ್ತರಲ್ಲ ಎಂದು ತಿಳಿಸಿದ್ದು,ಹಲವಾರು ಕರೋನ ವಾರಿಯರ್ಸ್ ಗಳು ದ್ವನಿಯನ್ನು ಉಚಿತವಾಗಿ ನೀಡಲು ಸಿದ್ದರಾಗಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ಹೈಕೋರ್ಟ್ ನ್ಯಾಯಮೂರ್ತಿಗಳು ಅರ್ಜಿಯ ವಿಚಾರಣೆಯನ್ನು ಜನವರಿ 18ಕ್ಕೆ ನಿಗದಿಪಡಿಸಿದ್ದಾರೆ.