ಆಧಾರ್ ಕಾರ್ಡ್ ಭಾರತೀಯರ ಒಂದು ಅವಿಭಾಜ್ಯ ಅಂಗ. ಪ್ರತಿಯೊಬ್ಬರ ಜೀವನಕ್ಕೊಂದು ಆಧಾರವೇ ಆಗಿದೆ. ಹಾಗಾಗಿ ಆಧಾರ್ ಕಾರ್ಡ ಅನ್ನು ಕಣ್ಣ ರೆಪ್ಪೆಯೆಯಂತೆ ಕಾಪಾಡಿಕೊಳ್ಳಿ.
ಸರ್ಕಾರಿ ಸೇವೆ, ಬ್ಯಾಂಕಿಂಗ್ ಸೌಲಭ್ಯಗಳು ಮತ್ತಿತರ ಆಧಾರ್-ಸಂಯೋಜಿತ ಸೇವೆಗಳಿಗೆ ಯಾವುದೇ ಅಡೆತಡೆಗಳಿಗೆ ಪರಿಹಾರ ರೂಪದಲ್ಲಿದೆ ಆಧಾರ್ ಕಾರ್ಡ್. ಹಾಗಾಗಿ ಪ್ರಸ್ತುತ ನಿಖರ ಮಾಹಿತಿಯೊಂದಿಗೆ ಆಧಾರ್ ಕಾರ್ಡ್ ನವೀಕರಣ ಅನಿವಾರ್ಯ ಮತ್ತು ಅತ್ಯಗತ್ಯವಾಗಿದೆ.
ಇದಕ್ಕೆ ನೀವು ಮಾಡಬೇಕಾದ್ದು ಇಷ್ಟೇ ಇನ್ನೈದು ದಿನದೊಳಗೆ ಆಧಾರ್ ಕಾರ್ಡ್ ಅನ್ನು ತಪ್ಪದೇ ನವೀಕರಿಸಿ. ಯಾವುದೇ ಕಾರಣಕ್ಕೂ ಮಿಸ್ ಮಾಡ್ಕೋಬೇಡಿ.
ಹೌದು, ನಮ್ಮ ಪ್ರತಿಯೊಂದು ಸೌಲಭ್ಯ, ಅಗತ್ಯತೆಗಳಿಗೆ ಆಧಾರವೇ ಆಗಿರುವ ಆಧಾರ್ ಕಾರ್ಡ ನವೀಕರಣಕ್ಕೆ ಇದೇ ಡಿಸೆಂಬರ್ 14 ಕೊನೇ ಅವಕಾಶ.
ಈಗಾಗಲೇ ಕೇಂದ್ರ ಸರ್ಕಾರ ಮೂರು ಬಾರಿ ನವೀಕರಣಕ್ಕೆ ಅವಧಿ ವಿಸ್ತರಿಸಿತ್ತು. ಡಿ.14ಕ್ಕೆ ಮತ್ತೊಮ್ಮೆ ಅಂತಿಮ ಗಡುವು ವಿಧಿಸಿ ಉಚಿತ ಆಫ್ ಡೇಟ್ ಗೆ ಅನುವು ಮಾಡಿಕೊಟ್ಟಿದೆ.
ಇದೊಂದೇ ವರ್ಷದಲ್ಲಿ ನಾಲ್ಕು ಬಾರಿ ಅವಧಿ ವಿಸ್ತರಣೆ; ಇದೇ ಲಾಸ್ಟ್ ಚಾನ್ಸ್
ಪ್ರಥಮವಾಗಿ ಆಧಾರ್ ನವೀಕರಣಕ್ಕೆ 2024 ಮಾರ್ಚ್ 14ರ ಗಡುವು ನೀಡಿದ್ದು, ನಂತರದಲ್ಲಿ ಜೂನ್ 14, ಸೆಪ್ಟೆಂಬರ್ 14, ಈಗ ಡಿಸೆಂಬರ್ 14 ಹೀಗೆ ಇದೊಂದು ವರ್ಷದಲ್ಲೇ ನಾಲ್ಕು ಬಾರಿ ನವೀಕರಣ ಅವಧಿ ವಿಸ್ತರಿಸಲಾಗಿದ್ದು, ಇದೇ ಲಾಸ್ಟ್ ಚಾನ್ಸ್.
UIDAI my adhaar ಪೋರ್ಟಲ್‌ನಲ್ಲಿ ನವೀಕರಣ ಸುಲಭ: ಡಿಸೆಂಬರ್ 14 ರೊಳಗೆ UIDAI my Aadhaar ಪೋರ್ಟಲ್‌ನಲ್ಲಿ ಇತ್ತೀಚಿನ ದಾಖಲೆಗಳನ್ನು ಆಪ್ಲೋಡ್ ಮಾಡುವ ಮೂಲಕ ಉಚಿತವಾಗಿ ನವೀಕರಣ ಮಾಡಬಹುದು.
ಡಿ.14ರ ನಂತರ ಶುಲ್ಕ ಅನ್ವಯ: ಡಿ.14ರ ಗಡುವು ಮುಗಿದ ಬಳಿಕವೂ ನವೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ ಆದರೆ, ನಿಗದಿತ ಶುಲ್ಕ ಭರಿಸಬೇಕಾಗುತ್ತದೆ. ಕನಿಷ್ಠ 25 ರಿಂದ 100 ರೂ.ವರೆಗೂ ಶುಲ್ಕವಿರುವ ಸಾಧ್ಯತೆಯಿದೆ.
ಅಲೆಯಬೇಕು ಸೇವಾ ಕೇಂದ್ರಗಳಿಗೆ
ಒಂದು ವೇಳೆ ಈ ಡಿ.14ರ ಅವಧಿಯಲ್ಲಿ ನವೀಕರಣ ಮಾಡಿಕೊಳ್ಳದೇ ಇದ್ದರೆ ಬಳಿಕ my adhaar ವೆಬ್ ಪೋರ್ಟಲ್ ಅಲ್ಲಿ ನವೀಕರಣಕ್ಕೆ ಅವಕಾಶವಿಲ್ಲ. ಅಗತ್ಯ ದಾಖಲೆಗಳ ಸಮೇತ ಸಮೀಪದ ಆಧಾರ್ ಸೇವಾ ಕೇಂದ್ರಗಳಿಗೆ ಅಲೆಯಬೇಕಾಗುತ್ತದೆ.
ಯಾರು ಯಾರು ಆಧಾರ್ ಕಾರ್ಡ್ ನವೀಕರಿಸಬೇಕು?
2016ರ ನಿಯಮಾವಳಿ ಅನ್ವಯ ಪ್ರತಿ 10 ವರ್ಷಗಳಿಗೊಮ್ಮೆ ಪ್ರತಿಯೊಬ್ಬರೂ ನವೀಕರಿಸಬೇಕು. ವಿಳಾಸ, ಮೊಬೈಲ್ ಸಂಖ್ಯೆ ಬದಲಾವಣೆ ಮತ್ತು ತಪ್ಪಾದ ಹೆಸರುಳ್ಳವರು ಮಿಸ್ ಮಾಡುವ ಹಾಗೇ ಇಲ್ಲ.
ಏನೇನು ಅಪ್ಡೇಟ್ ಆಗುತ್ತದೆ
ಮೊದಲನೆಯದಾಗಿ ಬಯೋಮೆಟ್ರಿಕ್. ಐರಿಸ್ ಸ್ಕ್ಯಾನ್, ಫಿಂಗರ್‌ಪ್ರಿಂಟ್ ಮತ್ತು ಮುಖದ ಛಾಯಾಚಿತ್ರ ನವೀಕರಿಸುತ್ತದೆ. ಎರಡನೆಯದಾಗಿ ವಿಳಾಸ, ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ, ಪ್ಯಾನ್ ಸಂಖ್ಯೆ, ಹೆಸರು ತಿದ್ದುಪಡಿ ಇದೆಲ್ಲ ನವೀಕರಿಸಲ್ಪಡುತ್ತದೆ.
ಆಧಾರ್ ಕಾರ್ಡ್ ನವೀಕರಣ ಶುಲ್ಕ ಎಷ್ಟು?
ಡಿ.14ರೊಳಗೇ myAadhaar ಪೋರ್ಟಲ್ ಮತ್ತು ಆನ್ ಲೈನ್ ಅಲ್ಲಿ ಅಪ್ಡೇಟ್ ಮಾಡಿದರೆ ಉಚಿತ. ಯಾವುದೇ ಶುಲ್ಕವಿಲ್ಲ. ಆದರೆ, ಬಳಿಕ ಭೌತಿಕ ಆಧಾರ್ ಕೇಂದ್ರಗಳಲ್ಲಿ ಆಫ್‌ಲೈನ್ ನವೀಕರಣ ರೂ. 50 ಶುಲ್ಕ. myAadhaar ಪೋರ್ಟಲ್ ನಲ್ಲಿ 25 ರೂ. ಶುಲ್ಕ ಅನ್ವಯಿಸುತ್ತದೆ.
ಆಧಾರ್ ಕಾರ್ಡ್ ನವೀಕರಣ ಹೇಗೆ?
ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಯೊಂದಿಗೆ ಆನ್‌ಲೈನ್‌ನಲ್ಲಿ ನವೀಕರಿಸಬಹುದು. ಹೆಸರು, ಐರಿಸ್ ಸ್ಕ್ಯಾನ್, ಫಿಂಗರ್‌ಪ್ರಿಂಟ್ ಮತ್ತು ಮುಖದ ಛಾಯಾಚಿತ್ರಗಳಂತಹ ನವೀಕರಣವನ್ನು ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರದಲ್ಲಿ ಆಫ್‌ಲೈನ್‌ನಲ್ಲಿ ಮಾಡಬೇಕಾಗುತ್ತದೆ.
- ವಿಧಾನ 1: UIDAI myAadhaar ಪೋರ್ಟಲ್. UIDAI ವೆಬ್‌ಸೈಟ್‌ಗೆ ಭೇಟಿ ನೀಡಿ ಆಧಾರ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿದರೆ OTP ಬರುತ್ತದೆ. OTP ಬಳಸಿ ಲಾಗಿನ್ ಮಾಡಬೇಕು. ಡಾಕ್ಯುಮೆಂಟ್ ಅಪ್‌ಡೇಟ್’ ಕ್ಲಿಕ್ ಮಾಡಿ ನವೀಕರಿಸಲು ಬಯಸುವ ವಿವರಗಳನ್ನು ಆಯ್ಕೆ ಮಾಡುವ ಜತೆಗೆ ಇದಕ್ಕೆ ಪೂರಕವಾದ (ಗುರುತಿನ ಪುರಾವೆ ಅಥವಾ ವಿಳಾಸದ ಪುರಾವೆ) ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ನವೀಕರಣ ವಿನಂತಿ ಸಲ್ಲಿಸಿ ಮತ್ತು ಟ್ರ್ಯಾಕಿಂಗ್‌ಗಾಗಿ ಅಪ್‌ಡೇಟ್ ವಿನಂತಿ ಸಂಖ್ಯೆ (URN) ಅನ್ನು ಗಮನಿಸಬೇಕು.
- ವಿಧಾನ 2: ನವೀಕರಿಸಬೇಕಾದ ದಾಖಲೆಗಳ ಮೂಲ ಪ್ರತಿಗಳೊಂದಿಗೆ ಆಧಾರ್ ನೋಂದಣಿ ಕೇಂದ್ರ/ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು. ಕೇಂದ್ರದಲ್ಲಿ ಲಭ್ಯವಿರುವ ಆಧಾರ್ ಅಪ್‌ಡೇಟ್ ಫಾರ್ಮ್ ಭರ್ತಿ ಮಾಡಿ ಸಲ್ಲಿಸಬೇಕು. ಅಗತ್ಯವಿದ್ದರೆ ಬಯೋಮೆಟ್ರಿಕ್ ಸಹ ಅನ್ನು ಒದಗಿಸಬೇಕು. ನಿಗದಿತ ಶುಲ್ಕ ಪಾವತಿಸಿ ಮತ್ತು ಅಪ್‌ಡೇಟ್ ವಿನಂತಿ ಸಂಖ್ಯೆ (URN) ನೊಂದಿಗೆ ಸ್ವೀಕೃತಿ ಚೀಟಿ ಪಡೆಯಬೇಕು.
ಏನೇನು ದಾಖಲೆಗಳು ಬೇಕು
- ಪಾಸ್ಪೋರ್ಟ್
- ಚಾಲಕ ಪರವಾನಗಿ
- PAN ಕಾರ್ಡ್
- ಮತದಾರರ ಗುರುತಿನ ಚೀಟಿ
- ಸರ್ಕಾರ ನೀಡಿದ ಗುರುತಿನ ಚೀಟಿಗಳು (ನಿವಾಸಿ ಪ್ರಮಾಣಪತ್ರ.
- ಕಾರ್ಮಿಕ ಕಾರ್ಡ್
- ಮದುವೆ ಪ್ರಮಾಣಪತ್ರ
- ಪಡಿತರ ಚೀಟಿ
ವಿಳಾಸದ ಪುರಾವೆಗೆ:
- ಬ್ಯಾಂಕ್ ಪಾಸ್ ಬುಕ್, ವಿದ್ಯುತ್ ಬಿಲ್, ಗ್ಯಾಸ್ ಬಿಲ್ (3 ತಿಂಗಳ ನಂತರದ್ದು)
- ಪಾಸ್ಪೋರ್ಟ್.
- ಮದುವೆ ಪ್ರಮಾಣಪತ್ರ
- ಪಡಿತರ ಚೀಟಿ
- ಆಸ್ತಿ ತೆರಿಗೆ ರಶೀದಿಗಳು (ಒಂದು ವರ್ಷದ ನಂತರದ್ದು)
- ಸರ್ಕಾರ ನೀಡಿದ ಗುರುತಿನ ಚೀಟಿಗಳಲ್ಲಿ ನಿವಾಸಿ ಪ್ರಮಾಣಪತ್ರ
- ಕಾರ್ಮಿಕ ಕಾರ್ಡ್.
ಗಮನದಲ್ಲಿಡಿ
ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆಯೇ ಆಧಾರ್ ವಿವರ ನವೀಕರಣ ಅಸಾಧ್ಯ. ಆನ್‌ಲೈನ್ ನವೀಕರಣಗಳಿಗಾಗಿ OTP ಸ್ವೀಕರಿಸಲು ನೋಂದಾಯಿತ ಮೊಬೈಲ್ ಸಂಖ್ಯೆಯ ಅಗತ್ಯವಿದೆ.
ಈಗಲೇ ಎಚ್ಚೆತ್ತುಕೊಳ್ಳಿ
ಡಿ.14ರೊಳಗೆ ಆಧಾರ್ ಕಾರ್ಡ್ ನವೀಕರಿಸದಿದ್ದರೆ ಸರ್ಕಾರಿ ಸೌಲಭ್ಯ, ಬ್ಯಾಂಕಿಂಗ್ ಸೇವೆ ಮತ್ತು ಆಧಾರ್‌ಗೆ ಲಿಂಕ್ ಮಾಡಲಾದ ಸೇವೆಗಳನ್ನು ಪಡೆಯುವಲ್ಲಿ ಸಹ ತೊಂದರೆ, ತಾಪತ್ರಯ ಎದುರಿಸಬೇಕಾಗುತ್ತದೆ. ಹಾಗಾಗಿ ಈಗಲೇ ಎಚ್ಚೆತ್ತುಕೊಳ್ಳುವುದು ಒಳಿತು.