Aadhaar update ಮಾಡದವರಿಗೆ ಶುಭ ಸುದ್ದಿ; ಆಧಾರ್ ನವೀಕರಣ ಗಡುವು ಮತ್ತೆ ವಿಸ್ತರಣೆ!

Aadhaar update : ಹತ್ತು ವರ್ಷಗಳಿಂದ ಆಧಾರ್ ಕಾರ್ಡ್ ಅಪ್​ಡೇಟ್  ಮಾಡದವರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಉಚಿತವಾಗಿ ಅಪ್​ಡೇಟ್ ಮಾಡುವ ಅವಕಾಶ ಇದೇ ಸೆಪ್ಟೆಂಬರ್ 14ಕ್ಕೆ ಕೊನೆಗೊಳ್ಳುತ್ತಿದ್ದಂತೆ ಅಧಿಸೂಚನೆಯನ್ನು ಮತ್ತೆ ವಿಸ್ತರಿಸಲಾಗಿದೆ.…

Aadhaar update

Aadhaar update : ಹತ್ತು ವರ್ಷಗಳಿಂದ ಆಧಾರ್ ಕಾರ್ಡ್ ಅಪ್​ಡೇಟ್  ಮಾಡದವರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಉಚಿತವಾಗಿ ಅಪ್​ಡೇಟ್ ಮಾಡುವ ಅವಕಾಶ ಇದೇ ಸೆಪ್ಟೆಂಬರ್ 14ಕ್ಕೆ ಕೊನೆಗೊಳ್ಳುತ್ತಿದ್ದಂತೆ ಅಧಿಸೂಚನೆಯನ್ನು ಮತ್ತೆ ವಿಸ್ತರಿಸಲಾಗಿದೆ.

ಹೌದು, ಹೊಸ ಪ್ರಕಟಣೆಯಂತೆ, ಆಧಾರ್ ಅನ್ನು ಡಿಸೆಂಬರ್ 14 ರವರೆಗೆ ಉಚಿತವಾಗಿ ನವೀಕರಿಸಬಹುದು. ಗಡುವಿನ ನಂತರ ರೂ.50 ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ, ಆಧಾರ್ ಅಪ್​ಡೇಟ್ ಮಾಡದಿದ್ದರೂ ಕೆಲಸ ಮಾಡುತ್ತದೆ ಎಂದು UIDAI (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ಹೇಳಿದೆ.

ಇದನ್ನು ಓದಿ: Debit-Credit Card ಬಳಕೆದಾರರಿಗೆ ಬಿಗ್ ಶಾಕ್!

Vijayaprabha Mobile App free

ಇನ್ನು, ಆಧಾರ್ ನವೀಕರಣಕ್ಕಾಗಿ ಗುರುತಿನ ಮತ್ತು ವಿಳಾಸ ಪುರಾವೆಗಳನ್ನು ಸಲ್ಲಿಸುವ ಅಗತ್ಯವಿದ್ದು, UIDAI (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ದಾಖಲೆಗಳ ಪ್ರಕಾರ ನಿಮ್ಮ ಮಾಹಿತಿಯನ್ನು ಪರಿಶೀಲಿಸುತ್ತದೆ ಮತ್ತು ನವೀಕರಿಸುತ್ತದೆ.

Aadhaar update : ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಹೇಗೆ?

  • ಆನ್‌ಲೈನ್‌ನಲ್ಲಿ ಕಾರ್ಡ್ ಅಪ್‌ಡೇಟ್ ಮಾಡಲು myaadhaar.uidai.gov.inಗೆ ಭೇಟಿ ನೀಡಿ,
  • ನಂತರ ಆಧಾರ್ ಸಂಖ್ಯೆ ಮತ್ತು OTP ಮೂಲಕ ಲಾಗಿನ್ ಆಗಬೇಕು.
  • ನಂತರ ಗುರುತಿನ ಮತ್ತು ವಿಳಾಸದ ದಾಖಲೆ ಸಲ್ಲಿಸಬೇಕು.
  • ದಾಖಲೆಗಳು 2 MB ಒಳಗೆ ಮತ್ತು JPEG, PNG ಅಥವಾ PDF ಫಾರ್ಮ್ಯಾಟ್‌ನಲ್ಲಿ ಇರಬೇಕು.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.