ನೌಕರರ ಭವಿಷ್ಯ ನಿಧಿ (ಇಪಿಎಫ್) ಚಂದಾದಾರರಾಗಿರುವ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳು ತಮ್ಮ ಆಧಾರ್ ಕಾರ್ಡ್ ಅನ್ನು ಸೆಪ್ಟೆಂಬರ್ 1 ರೊಳಗೆ ಭವಿಷ್ಯ ನಿಧಿ (ಪಿಎಫ್) ಖಾತೆಗಳೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಆಧಾರ್ ಅನ್ನು PF ಖಾತೆಗಳೊಂದಿಗೆ ಪ್ಯಾನ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕ ಜೂನ್ 1 ಆಗಿತ್ತು. ಬಳಿಕ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 1ರವರೆಗೆ ವಿಸ್ತರಿಸಲಾಗಿತ್ತು. ಲಿಂಕ್ ಮಾಡಲು ವಿಫಲವಾದರೆ ಪಿಎಫ್ ಹಣವನ್ನು ಪಡೆಯಲಾಗುವುದಿಲ್ಲ.
PF ಖಾತೆಯನ್ನು ಆಧಾರ್ನೊಂದಿಗೆ ಹೀಗೆ ಲಿಂಕ್ ಮಾಡಿ:
*EPF ವೆಬ್ಸೈಟ್ ಗೆ ಲಾಗ್ ಇನ್ ಆಗಿ, ಆನ್ಲೈನ್ ಸೇವೆಯ ಮೂಲಕ ಇ-ಕೆವೈಸಿ ಪೋರ್ಟಲ್ ಕ್ಲಿಕ್ ಮಾಡಿ ಮತ್ತು ನಂತರ ಯುಎಎನ್ ಆಧಾರ್ ಅನ್ನು ಲಿಂಕ್ ಮಾಡಿ.
*ಯುಎಎನ್ ಖಾತೆಯಲ್ಲಿ ನೋಂದಾಯಿಸಲಾದ ನಿಮ್ಮ ಯುಎಎನ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಅನ್ನು ಅಪ್ ಲೋಡ್ ಮಾಡಿ
*ಲಿಂಕ್ ಆದ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ. ಆ ಒಟಿಪಿಯನ್ನು ಆಧಾರ್ ಪೆಟ್ಟಿಗೆಯಲ್ಲಿ ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಸಲ್ಲಿಸಿ
*ನಂತರ Proceed to OTP verification ಎಂದು ಬರುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.