ಆಧಾರ್ ಸಂಖ್ಯೆ ಭಾರತೀಯ ಪ್ರಜೆ ಎನ್ನುವುದಕ್ಕೆ ಪ್ರಬಲ ಸಾಕ್ಷಿಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ವು ಈ ಹಕ್ಕನ್ನು ಪ್ರತಿಯೊಬ್ಬ ಭಾರತೀಯನಿಗೆ ನೀಡಿದೆ. UIDAI ಪ್ರಕಾರ, ಆಧಾರ್ ಒಂದು ಗುರುತಿನ ದಾಖಲೆಯಾಗಿದೆ. ಸರ್ಕಾರದ ಯಾವುದೇ ಯೋಜನೆ ಪಡೆಯಬೇಕಾದರೆ ಆಧಾರ್ ಕಾರ್ಡ್ ಬೇಕು.
ಇನ್ನು, ಆಧಾರ್ ಕಾರ್ಡ್ ದೇಶದಲ್ಲಿ ಅನೇಕ ಸೇವೆಗಳಿಗೆ ಬಳಕೆಯಾಗುತ್ತದೆ. ಕೆಲವೊಂದು ಸಂದರ್ಭ ಅನಾವಶ್ಯಕವಾಗಿ ಆಧಾರ್ ನಂಬರ್ ಪಡೆದು,ದುರ್ಬಳಕೆಯಾಗುವ ಸಂಭವವೂ ಇರುತ್ತದೆ. ಹಾಗಿದ್ರೆ ಯಾವ ಸೇವೆಗಳಿಗೆ ಆಧಾರ್ ಕಡ್ಡಾಯ ಎಂಬುದನ್ನು ನೋಡಿ.
ID ಪ್ರೂಫ್ ಅಥವಾ ವಿಳಾಸಗಳಿಗೆ
ಪಾಸ್‌ಪೋರ್ಟ್ ಮಾಡಿಸಲು
NEET ನಂತಹ ಪರೀಕ್ಷೆಗಳಿಗೆ
ಬ್ಯಾಂಕ್ ಖಾತೆ ತೆರೆಯುವುದು ಸೇರಿ ಎಲ್ಲಾ ವ್ಯವಹಾರಗಳಿಗೆ
ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಸಂಪರ್ಕಕ್ಕೆ ಅರ್ಜಿ ಹಾಕಲು
ಪಿಎಫ್ ಖಾತೆ ತೆರೆಯಲು ಮತ್ತು ಪಿಎಫ್ ಪಡೆಯಲು ಸಹ ಸಹಾಯಕ.
ಪ್ಯಾನ್ ಕಾರ್ಡ್ ಮಾಡಿಸಲು
ಪಿಂಚಣಿದಾರರಿಗೆ ಅತ್ಯಂತ ಸಹಾಯಕ.
ಸಕಾಲಿಕ ಪಾವತಿ ಆಯ್ಕೆ.
ಜೀವನ ಪ್ರಮಾಣ ಪತ್ರ ಪಡೆಯಲು ಸಹಾಯಕ.