BIG NEWS: ವಿರೋಧದ ನಡುವೆಯೂ ತನ್ನನ್ನು ತಾನೇ ಮದುವೆಯಾಗಿ ಶಾಕ್ ನೀಡಿದ ಯುವತಿ

ವಡೋದರ: ಭಾರೀ ವಿರೋಧದ ನಡುವೆಯೂ ಕೂಡ ಗುಜರಾತ್ ನ ವಡೋದರದ ಯುವತಿ ಕ್ಷಮಾ ಬಿಂದು ತನ್ನನ್ನು ತಾನೇ ಮದುವೆಯಾಗಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ಹೌದು, 24 ವರ್ಷದ ಯುವತಿ ಕ್ಷಮಾ ಬಿಂದು ತನ್ನನ್ನು ತಾನೇ…

married vijayaprabha news

ವಡೋದರ: ಭಾರೀ ವಿರೋಧದ ನಡುವೆಯೂ ಕೂಡ ಗುಜರಾತ್ ನ ವಡೋದರದ ಯುವತಿ ಕ್ಷಮಾ ಬಿಂದು ತನ್ನನ್ನು ತಾನೇ ಮದುವೆಯಾಗಿ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಹೌದು, 24 ವರ್ಷದ ಯುವತಿ ಕ್ಷಮಾ ಬಿಂದು ತನ್ನನ್ನು ತಾನೇ ಮದುವೆಯಾಗುವುದಾಗಿ ಘೋಷಣೆ ಮಾಡಿದಾಗ ಬಿಜೆಪಿ ಸೇರಿದಂತೆ ಬಲ ಪಂತೀಯ ಗುಂಪುಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ರೀತಿಯ ಮದುವೆ ಹಿಂದೂ ಧರ್ಮದ ಸಂಪ್ರದಾಯಕ್ಕೆ ವಿರುದ್ಧವಾಗಿದ್ದು, ಯಾವುದೇ ಕಾರಣಕ್ಕೂ ಮದುವೆ ನಡೆಯಲು ನಾವು ಬಿಡುವುದಿಲ್ಲ ಎಂದು ಬಿಜೆಪಿ ನಾಯಕಿ ಹೇಳಿದ್ದರು. ಆದರೆ, ವಿವಾದ ತಪ್ಪಿಸಲು ಮಾಸ್ಟರ್ ಪ್ಲಾನ್ ಮಾಡಿದ ಯುವತಿ ಕ್ಷಮಾ ಬಿಂದು ನಿಗದಿಗಿಂತ ಎರಡು ದಿನ ಮುಂಚಿತವಾಗಿ ಮದುವೆಯಾಗಿ, ಎಲ್ಲರಿಗೂ ಶಾಕ್ ನೀಡಿದ್ದಾರೆ.

ಮೆಹಂದಿ, ಹಲ್ಡಿ, ಆರತಕ್ಷತೆ ಸೇರಿದಂತೆ ಎಲ್ಲಾ ವಿಧಿ ವಿಧಾನಗಳನ್ನು ಪೂರೈಸಿ ಯುವತಿ ಮದುವೆ ಮಾಡಿಕೊಂಡಿದ್ದು, ಈ ಮೂಲಕ ತನ್ನನ್ನು ತಾನೇ ಮದುವೆಯಾದ ಭಾರತದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾಳೆ. ಇನ್ನು, ಕ್ಷಮಾ ಬಿಂದು ಅವರ ಆಪ್ತರು ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋ ಹರಿಬಿಟ್ಟಿರುವ ಯುವತಿ ಕ್ಷಮಾ ಬಿಂದು ಬೆಂಬಲಿಸಿದ ಎಲ್ಲರಿಗೆ ಧನ್ಯವಾದ ಹೇಳಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.