ಪ್ರೀತಿಸಿ ಮದ್ವೆಯಾಗಿದ್ದ ಜೋಡಿ..ಒಂದೂವರೆ ವರ್ಷಕ್ಕೆ ದುರಂತ ಅಂತ್ಯ..!

ಒಂದೂವರೆ ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ ದುರಂತ ಅಂತ್ಯ ಕಂಡ ಘಟನೆ ರಾಮನಗರ ತಾಲೂಕಿನ ತಿಮ್ಮಸಂದ್ರ ಹಾಗೂ ಅರಳಿಮರದದೊಡ್ಡಿ ಗ್ರಾಮದಲ್ಲಿ ನಡೆದಿದೆ. ಹೌದು, ಸಾಲಭಾದೆ ತಾಳಲಾರದೇ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೇ,…

suicide

ಒಂದೂವರೆ ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ ದುರಂತ ಅಂತ್ಯ ಕಂಡ ಘಟನೆ ರಾಮನಗರ ತಾಲೂಕಿನ ತಿಮ್ಮಸಂದ್ರ ಹಾಗೂ ಅರಳಿಮರದದೊಡ್ಡಿ ಗ್ರಾಮದಲ್ಲಿ ನಡೆದಿದೆ. ಹೌದು, ಸಾಲಭಾದೆ ತಾಳಲಾರದೇ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೇ, ಪತಿಯ ಸಾವಿನಿಂದ ಮನನೊಂದು ಪತ್ನಿ ಕೂಡ ನೇಣಿಗೆ ಶರಣಾಗಿದ್ದು, ಶಿವರಾಜು(27) ಮತ್ತು ನವ್ಯ (20) ಆತ್ಮಹತ್ಯೆ ಮಾಡಿಕೊಂಡ ದಂಪತಿಯಾಗಿದ್ದಾರೆ.

ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ರಾಮನಗರ ತಾಲೂಕಿನ ತಿಮ್ಮಸಂದ್ರ ಗ್ರಾಮದ ಶಿವರಾಜು, ಪಕ್ಕದ ಅರಳೀಮರದದೊಡ್ಡಿ ಗ್ರಾಮದ ನವ್ಯಾಳನ್ನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ. ಈ ಜೋಡಿಯ ಪ್ರೀತಿಗೆ ಮನೆಯವರ ವಿರೋಧದ ನಡುವೆಯೂ, ಒಂದೂವರೆ ವರ್ಷದ ಹಿಂದೆ ಇಬ್ಬರು ಮದುವೆಯಾಗಿದ್ದರು. ಬಳಿಕ ತಿಮ್ಮಸಂದ್ರ ಗ್ರಾಮದಲ್ಲಿ ವಾಸವಾಗಿದ್ದು, ಶಿವರಾಜು ಆಟೋ ಓಡಿಸಿಕೊಂಡು ಇದ್ದರೆ, ನವ್ಯ ರಾಮನಗರದ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ದಂಪತಿಯ ಸಂಸಾರ ಚೆನ್ನಾಗಿ ಇತ್ತು.

ಆದರೆ, ಅಕ್ಟೋಬರ್15ರಂದು ತಾಯಿ ಕೆಲಸಕ್ಕೆ ಹೋದ ನಂತರ ಪತ್ನಿ ನವ್ಯಳನ್ನು ರಾಮನಗರಕ್ಕೆ ಬಿಟ್ಟು ಬಂದು ಮನೆಯಲ್ಲಿಯೇ ಶಿವರಾಜು ನೇಣಿಗೆ ಶರಣಾಗಿದ್ದಾನೆ. ಗಂಡನ ಅಂತ್ಯಕ್ರಿಯೆ ಮುಗಿದ ಬಳಿಕ ನವ್ಯಳ ಪೋಷಕರು, ಆಕೆಯನ್ನು ಅರಳೀಮರದದೊಡ್ಡಿ ಮನೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನವ್ಯ ಕೂಡ ನಿನ್ನೆ (ಅಕ್ಟೋಬರ್16ರಂದು) ಮನೆಯಲ್ಲಿ ನೇಣುಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

Vijayaprabha Mobile App free

ಮೃತ ಶಿವರಾಜ್ ಬಡ್ಡಿಗೆ ಹಣ ತಂದು ಆಟೋ ಖರೀದಿಸಿದ್ದು, ಬಡ್ಡಿ ಕಟ್ಟಲು ಸಾಧ್ಯವಾಗದ ಹಿನ್ನೆಲೆ ಸಾಲಗಾರರು ಆಟೋ ತೆಗೆದುಕೊಂಡು ಹೋಗಿದ್ದರಂತೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗ್ತಿದೆ. ಗಂಡನ ಸಾವಿನಿಂದ ಮನನೊಂದು ಹೆಂಡ್ತಿ ನವ್ಯ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.