ಆಧಾರ್ ಕಾರ್ಡಿನಲ್ಲಿ ಮೊಬೈಲ್ ಸಂಖ್ಯೆ, ಹೆಸರು, ಲಿಂಗ, ಜನ್ಮ ದಿನಾಂಕವನ್ನು ತಿದ್ದುಪಡಿ ಮಾಡಲು ಮತ್ತು ಅಪ್ಡೇಟ್ ಮಾಡಲು ನಿಗದಿತ ಬ್ಯಾಂಕ್ ಶಾಖೆ, ಅಂಚೆ ಇಲಾಖೆ ಹಾಗೂ ಆಧಾರ್ ಕೇಂದ್ರಗಳಿಗೆ ಹೋಗುವ ಅಗತ್ಯವಿಲ್ಲ.
ಹೌದು, ಇನ್ಮುಂದೆ ಆಧಾರ್ ಕಾರ್ಡಿನಲ್ಲಿ ಮೊಬೈಲ್ ಸಂಖ್ಯೆ, ಹೆಸರು, ಲಿಂಗ, ಜನ್ಮ ದಿನಾಂಕವನ್ನು ತಿದ್ದುಪಡಿ ಮಾಡಲು ಮತ್ತು ಅಪ್ಡೇಟ್ ಮಾಡುವ ಕೆಲಸವನ್ನು ಮನೆ ಬಾಗಿಲಿಗೆ ಪೋಸ್ಟ್ ಮ್ಯಾನ್ ಬಂದು ಮಾಡಲಿದ್ದಾರೆ.
ಇಷ್ಟೇ ಅಲ್ಲದೆ, ಡಿಬಿಟಿ, RTO ಸೇವೆ, ಇಪಿಎಫ್ಒ, ಇ-ಫೈಲಿಂಗ್ ಸೇವೆಗಳು ದೊರೆಯಲಿದ್ದು, ಇದಕ್ಕಾಗಿ ನೀವು ₹50 ಮತ್ತು ಸಂಬಂಧಿಸಿದ ತೆರಿಗೆ ಕಟ್ಟಬೇಕು. ಇನ್ನು, ಈ ಸೇವೆ ಪಡೆಯಲು ಸಹಾಯವಾಣಿ ಸಂಖ್ಯೆ 155299ಗೆ ಕರೆ ಮಾಡಿ, ಮನವಿ ಸಲ್ಲಿಸಬೇಕು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.