ದಾವಣಗೆರೆ : ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಆರೋಪ ಹಿನ್ನಲೆ ನಟಿ ಸಂಜನಾ ಗಲ್ರಾಣಿ ಹಾಗು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಅವರಿಗೂ ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದಲ್ಲಿ ಸಂಬಂಧ ಇದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಶಾಸಕ ಜಮೀರ್ ಅಹಮದ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಜಮೀರ್ ಅಹಮದ್ ಚಿಲ್ಲರೆ ಗಿರಾಕಿ, ಗುಜರಿ ಗಿರಾಕಿ, ಜಮೀರ್ ಏನೇ ಗಳಿಸಿದ್ದರು ಅದು ಅನೈತಿಕ ಚಟುವಟಿಕೆಗಳಿಂದ ಗಳಿಸಿದ್ದು. ಅನೈತಿಕ ಚಟುವಟಿಕೆಗಳಿಂದಲೇ ಜಮೀರ್ ಉನ್ನತ ಸ್ಥಾನಕ್ಕೆ ಬಂದ ವ್ಯಕ್ತಿ ಎಂದು ಆರೋಪ ಮಾಡಿದ್ದಾರೆ.
ಇನ್ನು ಸ್ಯಾಂಡಲ್ ವುಡ್ ಡ್ರಗ್ಸ್ ವಿಚಾರದಲ್ಲಿ ಸತ್ಯಂಶ ಹೊರಬೀಳಲಿದೆ ಎಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ: ಜಗತ್ತಿನಲ್ಲಿ ಸಮಸ್ಯೆಗಳಿಲ್ಲದವರು ಯಾರು ಇಲ್ಲ, ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ: ಮಹಾಂತೇಶ ಬೀಳಗಿ