ಲಸಿಕೆ ಪಡೆದವರ ಗಮನಕ್ಕೆ: ಲಸಿಕೆ ಪ್ರಮಾಣ ಪತ್ರದಲ್ಲಿನ ವಿವರಗಳನ್ನು ಸರಿಪಡಿಸುವುದು ಹೇಗೆ..? ಇಲ್ಲಿದೆ ಮಾಹಿತಿ

ಕೊರೋನಾ ಲಸಿಕೆ ಪಡೆದವರಿಗೆ ಇನ್ನು ಮುಂದೆ ತಮ್ಮ ಪ್ರಮಾಣಪತ್ರದಲ್ಲಿನ ವೈಯಕ್ತಿಕ ವಿವರಗಳನ್ನು ಸರಿಪಡಿಸಲು ಸಾಧ್ಯವಾಗಲಿದ್ದು ಕೇಂದ್ರ ಸರ್ಕಾರವು ಈ ಹೊಸ ನವೀಕರಣವನ್ನು ಘೋಷಿಸಿದೆ. ಕೋವಿನ್ ಬಳಕೆದಾರರಿಗೆ ಲಸಿಕೆಯ ಪ್ರಮಾಣಪತ್ರದಲ್ಲಿ ಮುದ್ರಿಸಲಾದ ಹೆಸರು, ಹುಟ್ಟಿದ ವರ್ಷ…

ಕೊರೋನಾ ಲಸಿಕೆ ಪಡೆದವರಿಗೆ ಇನ್ನು ಮುಂದೆ ತಮ್ಮ ಪ್ರಮಾಣಪತ್ರದಲ್ಲಿನ ವೈಯಕ್ತಿಕ ವಿವರಗಳನ್ನು ಸರಿಪಡಿಸಲು ಸಾಧ್ಯವಾಗಲಿದ್ದು ಕೇಂದ್ರ ಸರ್ಕಾರವು ಈ ಹೊಸ ನವೀಕರಣವನ್ನು ಘೋಷಿಸಿದೆ.

ಕೋವಿನ್ ಬಳಕೆದಾರರಿಗೆ ಲಸಿಕೆಯ ಪ್ರಮಾಣಪತ್ರದಲ್ಲಿ ಮುದ್ರಿಸಲಾದ ಹೆಸರು, ಹುಟ್ಟಿದ ವರ್ಷ ಮುಂತಾದ ವಿವರಗಳಲ್ಲಿನ ತಪ್ಪುಗಳನ್ನು ಸರಿಪಡಿಸಬಹುದಾಗಿದ್ದು, ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು, ಕೋವಿನ್ ಪೋರ್ಟಲ್ ನಲ್ಲಿ ವಿಶೇಷ ವೈಶಿಷ್ಟ್ಯ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಲಸಿಕೆ ಪ್ರಮಾಣಪತ್ರದಲ್ಲಿನ ವಿವರಗಳನ್ನು ಸರಿಪಡಿಸುವುದು ಹೇಗೆ?

Vijayaprabha Mobile App free

>ಮೊದಲು ನಿಮ್ಮ ಮೊಬೈಲ್ ಸಂಖ್ಯೆ ಮೂಲಕ ಕೋವಿನ್ ಪೋರ್ಟಲ್ ಗೆ ಲಾಗಿನ್ ಮಾಡಿ.
>ನಂತರ ಪರಿಶೀಲನೆ ಹಾಗೂ ಮುಂದುವರೆಸು ಮೇಲೆ ಕ್ಲಿಕ್ ಮಾಡಿ.
>ನೀವು ಲಸಿಕೆ ಪಡೆದಿದ್ದರೆ ‘Raise an Issue’ ಬಟನ್ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
>ಯಾರ ಪ್ರಮಾಣಪತ್ರದಲ್ಲಿನ ವಿವರಗಳನ್ನು ಸರಿಪಡಿಸಬೇಕಾಗಿದೆಯೋ ಅವರ ಹೆಸರನ್ನು ಆಯ್ಕೆಮಾಡಿ.
>’ಪ್ರಮಾಣಪತ್ರದಲ್ಲಿ ಸರಿಪಡಿಸುವಿಕೆ’ಯಲ್ಲಿರುವ ಆಯ್ಕೆಗಳಲ್ಲಿ ನೀವು ಸರಿ ಮಾಡಬಯಸುವ ವಿವರದ ಮೇಲೆ ಕ್ಲಿಕ್ ಮಾಡಿ ಸರಿಪಡಿಸಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.