ಚಿಕ್ಕೋಡಿ : 73ನೇ ಗಣರಾಜ್ಯೋತವದಂದು ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡುವಾಗಲೇ ಹಿರಿಯ ಪತ್ರಕರ್ತರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.
ಅಬ್ದುಲ್ ರಜಾಕ್ ಅರಳಿಕಟ್ಟಿ (80) ಮೃತ ವ್ಯಕ್ತಿಯಾಗಿದ್ದು, ಇವರು ಸ್ಥಳೀಯ ಪತ್ರಿಕೆಯೊಂದರ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ನಿನ್ನೆ ( ಜನವರಿ 26) ರಂದು ಬೆಳಗ್ಗೆ ಧ್ವಜಾರೋಹಣ ನೆರವೇರಿಸಿ ಎಲ್ಲರೊಡನೆ ಇವರು ಕೂಡ ರಾಷ್ಟ್ರಗೀತೆ ಹಾಡುತ್ತಿದ್ದರು.
ಈ ವೇಳೆ ಇದ್ದಕ್ಕಿದ್ದ ಹಾಗೇ ನಿಂತಲ್ಲಿಯೇ ಕುಸಿದು ಬಿದ್ದ ಪತ್ರಕರ್ತ ಅಬ್ದುಲ್ ರಜಾಕ್ ಅರಳಿಕಟ್ಟಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.