ಬಳ್ಳಾರಿ: ಜಿಲ್ಲೆಯಲ್ಲಿ ಮತ್ತೊಂದು ಹೈಪ್ರೊಫೈಲ್ ವರದಕ್ಷಿಣೆ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಹೈದ್ರಾಬಾದ್ ಮೂಲದ ವೈದ್ಯೆಯನ್ನು ಮದುವೆಯಾಗಿ ಪ್ರತಿನಿತ್ಯ ವರದಕ್ಷಿಣೆ ಕಿರುಕುಳ ನೋಡುತ್ತಿದ್ದ ವ್ಯಕ್ತಿ ಇದೀಗ ಮತ್ತೊಂದು ವಿವಾಹವಾಗಿ ಮಹಿಳೆಗೆ ವಂಚಿಸಿದ್ದಾನೆ.
2019ರ ನ.28ರಂದು ಮೌನಿಕಾ-ರಘುರಾಮ ರೆಡ್ಡಿ ಇಬ್ಬರಿಗೂ ಮದುವೆ ಆಗಿತ್ತು. ಆಸ್ಟ್ರೇಲಿಯಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಎಂದು ಹೇಳಿ ದಂತ ವೈದ್ಯೆ ಮೌನಿಕಾ ರೆಡ್ಡಿ ಜತೆ ರಘುರಾಮ ರೆಡ್ಡಿ ಮದುವೆ ಆಗಿದ್ದ. ಮದುವೆ ವೇಳೆ ಮೌನಿಕಾ ಪೋಷಕರಿಂದ 1 ಕೆಜಿ ಚಿನ್ನ, ಒಂದೂವರೆ ಕೆಜಿ ಬೆಳ್ಳಿ, 50 ಲಕ್ಷ ನಗದು ಪಡೆದಿದ್ದ. ಮದುವೆಯಾದ 2 ತಿಂಗಳ ಬಳಿಕ ಮತ್ತಷ್ಟು ಹಣ ತರುವಂತೆ ಪತ್ನಿ ಮೌನಿಕಾಗೆ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.