ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಭಿವಾಪುರ್ ಪ್ರದೇಶದಲ್ಲಿ 47 ವರ್ಷದ ವಿವಾಹಿತನೊಬ್ಬ ನೆರೆ ಮನೆಯ ಮಹಿಳೆ ಮಾತು ಬಿಟ್ಟಿದ್ದಕ್ಕೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಭರತ್ ಆಂಡೇಲ್ಕರ್ ಮೃತ ವ್ಯಕ್ತಿಯಾಗಿದ್ದು, ಈತನಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮಾತು ಬಿಟ್ಟ ಮಹಿಳೆ ಈತನ ನೆರೆಯವಳು, ಆಕೆಯೂ ವಿವಾಹಿತಳಾಗಿದ್ದು, ಆಂಡೇಲ್ಕರ್ ಗೆ ಮದುವೆಯಾಗಿ ಮಕ್ಕಳಿದ್ದರೂ ಪಕ್ಕದ ಮನೆಯ ವಿವಾಹಿತ ಮಹಿಳೆ ಜೊತೆ ಹೆಚ್ಚಿನ ಆತ್ಮೀಯತೆ ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದ್ದನಂತೆ.
ಹಾಗಾಗಿ, ಮಹಿಳೆ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದು, ಇದರಿಂದ ಕೋಪಗೊಂಡ ಆಂಡೇಲ್ಕರ್, ಆಕೆಯೊಂದಿಗೆ ಜಗಳವಾಡಿ ಹಲ್ಲೆ ಮಾಡಿದ್ದು,ಈ ಸಂಬಂಧ ಮಹಿಳೆ ದೂರು ದಾಖಲಿಸಿದ್ದಳು. ಈ ನಡುವೆ ಆಂಡೇಲ್ಕರ್ ಹೊಲಕ್ಕೆ ಹೋಗಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.