ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 21,614 ಜನ ಡಿಸ್ಚಾರ್ಜ್ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 25,32,719ಕ್ಕೆ ಏರಿಕೆಯಾಗಿದ್ದು, ಇಂದು 9,785 ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 27,57,324ಕ್ಕೆ ಏರಿಕೆಯಾಗಿದೆ.
ಇನ್ನು ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 144 ಜನ ಮಹಾಮಾರಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 32788ಕ್ಕೆ ತಲುಪಿದ್ದು, ನಿಧಾನವಾಗಿ ಕೊರೋನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದು, ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.
ಇಂದು 9,785 ಕೇಸ್; ಯಾವ ಜಿಲ್ಲೆಯಲ್ಲಿ ಎಷ್ಟು?
ಬಾಗಲಕೋಟೆ-70, ಬಳ್ಳಾರಿ-337, ಬೆಳಗಾವಿ-449, ಬೆಂ.ಗ್ರಾ- 242, ಬೆಂಗಳೂರು-2454, ಬೀದರ್-30, ಚಾಮರಾಜನಗರ-176, ಚಿಕ್ಕಬಳ್ಳಾಪುರ-273, ಚಿಕ್ಕಮಗಳೂರು-342, ಚಿತ್ರದುರ್ಗ-156, ದ.ಕನ್ನಡ-618, ದಾವಣಗೆರೆ-372, ಧಾರವಾಡ-212, ಗದಗ-60, ಹಾಸನ-624, ಹಾವೇರಿ-65, ಕಲಬುರಗಿ-60, ಕೊಡಗು-194, ಕೋಲಾರ-193, ಕೊಪ್ಪಳ-127, ಮಂಡ್ಯ-320, ಮೈಸೂರು-482, ರಾಯಚೂರು-59, ರಾಮನಗರ-32, ಶಿವಮೊಗ್ಗ-715, ತುಮಕೂರು-440, ಉಡುಪಿ-263, ಉ.ಕನ್ನಡ-229, ವಿಜಯಪುರ-188, ಯಾದಗಿರಿ-9 ಪ್ರಕರಣಗಳು ಪತ್ತೆಯಾಗಿವೆ.