ತೀರ್ಥಯಾತ್ರೆಗೆ ಹೊರಟಿದ್ದ ಬಸ್ ಗೆ ತಾಗಿದ ವಿದ್ಯುತ್ ತಂತಿ; 6 ಜನರು ದುರ್ಮರಣ, 17 ಜನರಿಗೆ ಗಂಭೀರ ಗಾಯ

ಜೈಪುರ: ತೀರ್ಥಯಾತ್ರೆಗೆ ಹೊರಟಿದ್ದ 36 ಜನರಿದ್ದ ಬಸ್ ರಾಜಸ್ತಾನದ ಜಲೌರ್ ನ ಮಹೇಶಪುರ ಗ್ರಾಮದ ಅತ್ತಿರ ಶನಿವಾರ ರಾತ್ರಿ ಭೀಕರ ಅವಘಡ ಸಂಭವಿಸಿದ್ದು ಬಸ್ ಗೆ 11 ಕೆವಿ ವೋಲ್ಟೇಜ್ ವಿದ್ಯುತ್ ತಂತಿ ತಗುಲಿ…

accident rajastan vijayaprabha

ಜೈಪುರ: ತೀರ್ಥಯಾತ್ರೆಗೆ ಹೊರಟಿದ್ದ 36 ಜನರಿದ್ದ ಬಸ್ ರಾಜಸ್ತಾನದ ಜಲೌರ್ ನ ಮಹೇಶಪುರ ಗ್ರಾಮದ ಅತ್ತಿರ ಶನಿವಾರ ರಾತ್ರಿ ಭೀಕರ ಅವಘಡ ಸಂಭವಿಸಿದ್ದು ಬಸ್ ಗೆ 11 ಕೆವಿ ವೋಲ್ಟೇಜ್ ವಿದ್ಯುತ್ ತಂತಿ ತಗುಲಿ ಬಸ್ ಸುಟ್ಟು ಭಸ್ಮವಾಗಿದ್ದು, ಬಸ್ ನಲ್ಲಿದ್ದ 6 ಜನರು ಸಜೀವ ದಹನವಾಗಿದ್ದು, 17 ಜನರಿಗೆ ಗಂಭೀರ ಗಾಯಗಳಾಗಿವೆ.

ಜೈನ ಸಮುದಾಯದ 36 ಜನರು ತೀರ್ಥಕ್ಷೇತ್ರದ ದರ್ಶನ ಪಡೆದು ಅಜಮೇರ್ ನತ್ತ ಪ್ರಯಾಣ ಬೆಳೆಸಿದ್ದರು, ಈ ವೇಳೆ ರಾಜಸ್ತಾನದ ಜಲೌರ್ ನ ಮಹೇಶಪುರ ಗ್ರಾಮದ ಅತ್ತಿರ ಬಸ್ ಗೆ 11 ಕೆವಿ ವೋಲ್ಟೇಜ್ ವಿದ್ಯುತ್ ತಂತಿ ತಗುಲಿದ್ದು, ಬಸ್ ನಲ್ಲಿದ್ದ 36 ಜನರ ಪೈಕಿ 6 ಜನರು ಸಜೀವ ದಹನವಾಗಿದ್ದು, ಗಾಯಾಳುಗಳನ್ನು ಜಲೌರ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಗಂಭೀರ ಗಾಯಾಳದವರನ್ನು ಜೋದ್ ಪುರ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.

ಯಾತ್ರಿಗಳು ಶನಿವಾರ ರಾಜಸ್ತಾನದ ಜಲೌರ್ ನಲ್ಲಿರುವ ಜೈನ ಮಂದಿರ ದರ್ಶನ ಪಡೆದು ಅಜಮೇರ್ ಮಾರ್ಗವಾಗಿ ಬೀವರ್ ಗೆ ಹೊರಟಿದ್ದರು ಎನ್ನಲಾಗಿದ್ದು, ಬಸ್ ಚಾಲಕ ಗೂಗಲ್ ಮ್ಯಾಪ್ ಬಳಸಿ ಜಲೌರ್ ನ ಮಹೇಶಪುರ ಗ್ರಾಮದ ಸಂದಿಗಳಲ್ಲಿ ಹೊರಟಿದ್ದು, ಈ ವೇಳೆ ಗ್ರಾಮದಲ್ಲಿನ ವಿದ್ಯುತ್ ತಂತಿ ಬಡಿದು ಬೆಂಕಿ ಹತ್ತಿಕೊಂಡ ಪರಿಣಾಮ ಅವಘಡ ಸಂಭವಿಸಿದೆ ಎನ್ನಲಾಗಿದೆ.

Vijayaprabha Mobile App free

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.