BIG NEWS: ಭಾರೀ ಮಳೆಗೆ 2 ತಿಂಗಳಲ್ಲಿ 59 ಮಂದಿ ಸಾವು; ಭಾರಿ ಪ್ರಮಾಣದ ಬೆಳೆ ಹಾನಿ

ರಾಜ್ಯಾದ್ಯಂತ ಈ ವರ್ಷ ಅತ್ಯಧಿಕ ಮಳೆಯಾಗಿದ್ದು, ವರುಣ ನಿಜಕ್ಕೂ ಮರಣಮೃದಂಗ ಬಾಸಿದ್ದಾನೆ. ಇತ್ತ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದ ಎರಡು ತಿಂಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಒಟ್ಟು 59…

heavy rain vijayaprabha news

ರಾಜ್ಯಾದ್ಯಂತ ಈ ವರ್ಷ ಅತ್ಯಧಿಕ ಮಳೆಯಾಗಿದ್ದು, ವರುಣ ನಿಜಕ್ಕೂ ಮರಣಮೃದಂಗ ಬಾಸಿದ್ದಾನೆ. ಇತ್ತ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದ ಎರಡು ತಿಂಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಒಟ್ಟು 59 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಅಷ್ಟೇ ಅಲ್ಲ, ಬಾರಿ ಮಳೆಯಿಂದ ರೈತರು ಬೆಳೆದಿದ್ದ ಅಪಾರ ಪ್ರಮಾಣದ ಬೆಳೆಗಳು ನೀರಿನಲ್ಲಿ ಜಲಾವೃತವಾಗಿದ್ದು, ಹಲವೆಡೆ ಮನೆಗಳು ಕುಸಿದು ಬಿದ್ದಿದ್ದು, ಸರ್ಕಾರೀ ಸ್ವಾಮ್ಯದ ಅಸ್ತಿಗಳಿಗೂ ಕೂಡ ಮಳೆಯಿಂದ ಹಾಳಾಗಿವೆ.

ಇದೀಗ ಹಲವು ಜಿಲ್ಲೆಗಳಲ್ಲಿ ಮತ್ತೆ ಭಾರೀ ಮಳೆ ಮುಂದುವರೆದಿದ್ದು, ಹಾಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂಬಂಧಪಟ್ಟ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.

Vijayaprabha Mobile App free

ಭಾರೀ ಮಳೆ; 6,000 ಜನರ ಸಾವು.!

ಇನ್ನು, ದೇಶದಲ್ಲಿ ಕಳೆದ 3 ವರ್ಷಗಳಲ್ಲಿ ಭಾರೀ ಮಳೆಯಿಂದಾಗಿ 6000 ಜನರ ಸಾವು ಸಂಭವಿಸಿದೆ ಎಂದು ಜಲಶಕ್ತಿ ಸಚಿವಾಲಯದ ಅಂಕಿ ಅಶಂಗಳಿಂದ ತಿಳಿದುಬಂದಿದ್ದು, 59 ಸಾವಿರ ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎನ್ನಲಾಗಿದೆ.

ಹೌದು, 2018ರಲ್ಲಿ 1,839, 2020 ರಲ್ಲಿ 1365 ಜನರು ಸಾವನ್ನಪ್ಪಿದ್ದಾರೆಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಜಲಶಕ್ತಿ ಸಚಿವಾಲಯ ಉತ್ತರ ನೀಡಿದ್ದು,ಈ ವರ್ಷವೂ ಭಾರೀ ಮಳೆಯಾಗಿದ್ದರಿಂದ ದೇಶಾದ್ಯಂತ ಅಪಾರ ಹಾನಿಯುಂಟು ಮಾಡಿದಲ್ಲದೇ ಜನರ ಪ್ರಾಣ ತೆಗೆದುಕೊಂಡಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.