ಇಂದು ಮತ್ತು ನಾಳೆ ಬೆಂಗಳೂರು, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ವಿವಿಧ ಮಾರ್ಗಗಳ ಸುಮಾರು 56 ಪ್ಯಾಸೆಂಜರ್ ರೈಲುಗಳ ಓಡಾಟವನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಹೌದು, ತಾಂತ್ರಿಕ ನಿರ್ವಹಣಾ ಕಾಮಗಾರಿ ಹಿನ್ನೆಲೆ ಹಾಗು ದೊಡ್ಡ ಸಂಖ್ಯೆಯಲ್ಲಿ ರೈಲ್ವೆ ಸಿಬ್ಬಂದಿ ಇಲಾಖಾ ಪರೀಕ್ಷೆ ಹಾಜರಾಗುತ್ತಿರುವ ಕಾರಣ ವಿವಿಧ ಮಾರ್ಗಗಳ 56 ಪ್ಯಾಸೆಂಜರ್ ರೈಲುಗಳನ್ನು ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಬೆಂಗಳೂರು-ಮಾರಿಕುಪ್ಪಂ ಮಾರ್ಗದ 30 ರೈಲುಗಳು, ಬೆಂಗಳೂರು-ಮೈಸೂರು (10), ಬೆಂಗಳೂರು-ಧರ್ಮಾವರಂನ (6), ಬೆಂಗಳೂರು-ತುಮಕೂರು (4), ಬಂಗಾರಪೇಟೆ-ಮಾರಿಕುಪ್ಪಂನ (4), ಬೆಂಗಳೂರು -ಧರ್ಮಪುರಿ (4) ರೈಲುಗಳನ್ನು ರದ್ದು ಮಾಡಲಾಗಿದೆ.
ಅಷ್ಟೇ, ಅಲ್ಲ ಬೆಂಗಳೂರು ರೈಲ್ವೆ ವಿಭಾಗದಲ್ಲಿ ಕೆಎಸ್ ಆರ್ ಬೆಂಗಳೂರು ನಿಲ್ದಾಣದಿಂದ ಜೋಲಾರಪೇಟೆ, ಶಿವಮೊಗ್ಗ, ಹುಬ್ಬಳ್ಳಿ, ರಾಮನಗರ ಇನ್ನು ಹಲವೆಡೆ ರೈಲು ಸಂಚಾರ ರದ್ದಾಗಿವೆ.