ರಾಜ್ಯದಲ್ಲಿ ಕಳೆದ 1 ವಾರದಿಂದ ಅಡಿಕೆ ದರ ಇಳಿಕೆಯಾಗುತ್ತಿದ್ದು, ಇದರಿಂದ ಅಡಿಕೆ ದಾಸ್ತಾನು ಮಾಡಿಕೊಂಡ ರೈತರಿಗೆ ಆತಂಕ ಎದುರಾಗಿದೆ. ಹೌದು, ಕೆಂಪಡಿಕೆ ದರ ಪ್ರತಿ ಕ್ವಿಂಟಾಲ್‌ಗೆ 5,000 ರೂ ಕಡಿಮೆಯಾಗಿದ್ದು, ಚಾಲಿ ಅಡಿಕೆಯ ದರವೂ ಇಳಿಕೆಯಾಗಿದೆ.
ಕೆಂಪಡಿಕೆ ಕ್ವಿಂಟಾಲ್‌ಗೆ ಕನಿಷ್ಠ 47,000 ರೂ, ಗರಿಷ್ಠ 50,500 ರೂ.ಗೆ ಮಾರಾಟವಾಗುತ್ತಿದ್ದು, ಚಾಲಿ ಅಡಿಕೆ ದರ 40,000-43,500 ರೂ ಇದೆ. ಈ ಮೊದಲು ಕೆಂಪಡಿಕೆ ಕ್ವಿಂಟಾಲ್‌ಗೆ 55,000 ರೂ ಆಗಿತ್ತು. ಚಾಲಿ ಅಡಿಕೆ ದರವೂ 45,000 ರೂ.ಗೆ ಏರಿತ್ತು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.