ಪ್ರಧಾನ ಮಂತ್ರಿ ಕನ್ಯಾ ಆಶೀರ್ವಾದ ಯೋಜನೆಯಡಿ ಹೆಣ್ಣು ಮಗುವಿಗೆ ತಿಂಗಳಿಗೆ 5000 ರೂ ನೀಡಲಾಗುವುದು ಎಂದು ಸಂದೇಶವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.
ಹೌದು, ಮೋದಿ ಸರ್ಕಾರವು ಪ್ರಧಾನ ಮಂತ್ರಿ ʻಕನ್ಯಾ ಆಶೀರ್ವಾದ ಯೋಜನೆಯʼನ್ನು ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ ಪ್ರತಿ ಹೆಣ್ಣು ಮಗುವಿಗೆ ತಿಂಗಳಿಗೆ ₹ 5,000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುತ್ತಿದೆ ಎಂದು ಯೂಟ್ಯೂಬ್ ವೀಡಿಯೊ ಒಂದರಲ್ಲಿ ಹೇಳಲಾಗಿದೆ.
ಆದ್ರೆ ಕೇಂದ್ರ ಸರ್ಕಾರವು ಅಂತಹ ಯಾವುದೇ ಯೋಜನೆಯನ್ನು ಜಾರಿಗೊಳಿಸಲಿಲ್ಲ ಎಂದು ಪ್ರೆಸ್ ಇನ್ಫಾಮೇಶನ್ ಬ್ಯೂರೋ ಸ್ಪಷ್ಟಪಡಿಸಿದೆ. ಇಂತಹ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಈ ರೀತಿಯ ಯಾವುದೇ ಯೋಜನೆ ಜಾರಿಯಾಗುತ್ತಿಲ್ಲ. ಇದನ್ನು ಜನರು ನಂಬಬಾರದು ಎಚ್ಚರಿಕೆಯಿಂದ ಇರಬೇಕೆಂದು ಪಿಐಬಿ ಮಾಹಿತಿ ನೀಡಿದೆ.