ಬರೋಬ್ಬರಿ 500 ಜನರನ್ನು ಒಳಗೊಂಡು 104 ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯು ಫಲ ನೀಡಿದ್ದು, ಜೂನ್ 10 ರಂದು 80 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ ಛತೀಸ್ ಗಢದ ಜಾಂಜ್‌ಗೀರ್-ಚಂಪಾ ಜಿಲ್ಲೆಯ 10 ವರ್ಷದ ಬಾಲಕ ರಾಹುಲ್ ಸಾಹು ಅನ್ನು ರಕ್ಷಣೆ ಮಾಡಲಾಗಿದೆ.
ನಿನ್ನೆ (ಜೂನ್ 14) ಮಧ್ಯರಾತ್ರಿ ಬಾಲಕ ರಾಹುಲ್ ನ್ನು ತಲುಪಿದ ರಕ್ಷಣಾ ತಂಡದ ಸದಸ್ಯರು, ಸ್ಟ್ರೆಚರ್‌ನಲ್ಲಿ ಸುರಂಗದಿಂದ ಹೊರಗೆ ಕರೆ ತಂದಿದ್ದಾರೆ. ನಂತರ, ಆತನನ್ನು ಆಂಬ್ಯುಲೆನ್ಸ್‌ನಲ್ಲಿ ಬಿಲಾಸ್‌ಪುರದ ಅಪೊಲೊ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದಕ್ಕಾಗಿ ಹಸಿರು ಕಾರಿಡಾರ್ ರಚಿಸಲಾಗಿತ್ತು.
ಕಳೆದ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಆಟವಾಡುತ್ತಿದ್ದಾಗ ಮಲ್ಖರೋಡ ಡೆವಲಪ್‌ಮೆಂಟ್ ಬ್ಲಾಕ್‌ನ ಪಿಹ್ರಿದ್ ಗ್ರಾಮದ ಬಾಲಕ ರಾಹುಲ್ ಸಾಹು ತನ್ನ ಮನೆಯ ಹಿಂಬದಿಯಲ್ಲಿದ್ದ ಬಳಕೆಯಾಗದ 80 ಅಡಿ ಆಳದ ಬೋರ್‌ವೆಲ್‌ಗೆ ಬಾಲಕ ಬಿದ್ದಿದ್ದ.
ಕಳೆದ ನಾಲ್ಕು ದಿನಗಳಿಂದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಮುಖ್ಯಮಂತ್ರಿ ಭೂಪೇಶ್ ಬಘೇಲ್, ರಕ್ಷಣಾ ತಂಡದ ದಣಿವರಿಯದ ಮತ್ತು ಬದ್ಧತೆಯ ಕಾರ್ಯಾಚರಣೆಯ ಯಶಸ್ಸಿಗೆ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ರಾಹುಲ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.