ಬೈಕ್ ಸವಾರರಿಗೆ ಪೊಲೀಸ್ ಇಲಾಖೆ ಶಾಕ್ ನೀಡಿದ್ದು, ಕಳಪೆ ಗುಣಮಟ್ಟದ ಹೆಲ್ಮೆಟ್ ಬಳಕೆ ನಿರ್ಮೂಲನೆಗೆ ಮುಂದಾಗಿರುವ ಪೊಲೀಸರು, ಇನ್ನು ಮುಂದೆ ₹500 ದಂಡ ಹಾಕಲಿದ್ದಾರೆ.
ಹೌದು, ಅರ್ಧ ಹೆಲ್ಮೆಟ್ ಧರಿಸುವ ಸವಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸ್ ಇಲಾಖೆ ಎಚ್ಚರಿಸಿದ್ದು, ಐಎಸ್‌ಐ ಮಾರ್ಕ್ ಇಲ್ಲದ ಮತ್ತು ತಲೆಯ ಭಾಗವನ್ನು ಪೂರ್ಣವಾಗಿ ಮುಚ್ಚದಂತಹ ಹೆಲ್ಮೆಟ್‌ಗಳನ್ನು ಧರಿಸಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿರುವುದು ಕಂಡು ಬರುತ್ತಿದ್ದು, ದಂಡ ವಿಧಿಸುವುದಾಗಿ ತಿಳಿಸಿದ್ದಾರೆ.
ಕಳಪೆ ಗುಣಮಟ್ಟದ, ಅರ್ಧ ಹೆಲ್ಮೆಟ್ ಧರಿಸಿದರೂ ದಂಡ ಕಟ್ಟಬೇಕಾಗಿದೆ. ಇಂತಹ ಹೆಲ್ಮೆಟ್ ಧರಿಸಿದ್ದರೂ, ಅದು ‘ಹೆಲ್ಮೆಟ್ ಧರಿಸಿಲ್ಲ’ ಎಂಬ ನಿಯಮದಡಿ ದಂಡ ವಿಧಿಸುವುದಾಗಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ನಿಮ್ಮ ಪ್ರಾಣದ ಹಿತದೃಷ್ಟಿಯಿಂದ ಗುಣಮಟ್ಟದ, ISI ಮುದ್ರೆ ಹೊಂದಿರುವ ಹೆಲ್ಮೆಟ್‌ಗಳನ್ನೇ ಧರಿಸಿ, ಪ್ರಯಾಣಿಸಿ..