Mushroom farming | ಅಣೆಬೆ ಕೃಷಿ ಸರ್ಕಾರದಿಂದ ಶೇ 50 ರಷ್ಟು ಸಬ್ಸಿಡಿ ಲಭ್ಯ

Mushroom farming | ಅಣೆಬೆ ಕೃಷಿ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭನೀಡುವ ಕೃಷಿ ಉದ್ಯಮವಾಗಿ ಬೆಳೆಯುತ್ತಿದೆ. ಇದನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಣೆಬೆ ಕೃಷಿಗೆ ವಿವಿಧ ಯೋಜನೆಗಳಡಿ ಆಕರ್ಷಕ ಸಹಾಯಧನವನ್ನು…

Mushroom farming

Mushroom farming | ಅಣೆಬೆ ಕೃಷಿ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭನೀಡುವ ಕೃಷಿ ಉದ್ಯಮವಾಗಿ ಬೆಳೆಯುತ್ತಿದೆ. ಇದನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಣೆಬೆ ಕೃಷಿಗೆ ವಿವಿಧ ಯೋಜನೆಗಳಡಿ ಆಕರ್ಷಕ ಸಹಾಯಧನವನ್ನು ಘೋಷಿಸಿವೆ. ಸರ್ಕಾರದ ಈ ಯೋಜನೆಯಡಿಯಲ್ಲಿ ಸಣ್ಣ ಹಾಗೂ ಮಧ್ಯಮ ರೈತರು, ಯುವಕರು ಮತ್ತು ಸ್ವ ಉದ್ಯೋಗ ಆರಂಭಿಸಲು ಬಯಸುವವರು ಪ್ರಯೋಜನ ಪಡೆಯಬಹುದಾಗಿದೆ.

ಸಬ್ಸಿಡಿ ವಿವರ

ರಾಜ್ಯ ತೋಟಗಾರಿಕೆ ಇಲಾಖೆಯು ಅಣೆಬೆ ಕೃಷಿ ಘಟಕ ಸ್ಥಾಪನೆಗೆ ರೈತರಿಗೆ ಸಹಾಯಧನ ನೀಡುತ್ತಿದೆ. ಸಾಮಾನ್ಯ ವರ್ಗದ ರೈತರಿಗೆ ಶೇ.40-50ರಷ್ಟು, ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ ಶೇ.70-90ರಷ್ಟು ಸಹಾಯಧನ ಲಭ್ಯವಿದೆ. ಘಟಕ ಸ್ಥಾಪನೆಗೆ ₹1.5 ಲಕ್ಷದಿಂದ ₹3 ಲಕ್ಷದವರೆಗೆ ವೆಚ್ಚವಾಗಬಹುದು. ರಾಷ್ಟ್ರೀಯ ತೋಟಗಾರಿಕೆ ಮ೦ಡಳಿ ಯೋಜನೆಯಡಿ ವೈಯಕ್ತಿಕ ರೈತರು, ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳಿಗೆ ಶೇ.40ರಷ್ಟು ಅಥವಾ ಗರಿಷ್ಠ ₹30 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ.

ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ

ಅಣೆಬೆ ಉತ್ಪನ್ನಗಳ ಸಂಸ್ಕರಣೆ ಮತ್ತು ಮಾರುಕಟ್ಟೆಗಾಗಿ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಉತ್ತೇಜನ ಯೋಜನೆಯಡಿ ಸಹಾಯಧನ ಲಭ್ಯವಿದೆ. ಈ ಯೋಜನೆಯಡಿ ಒಟ್ಟು ವೆಚ್ಚದ ಶೇ.50ರಷ್ಟು ಅಥವಾ ಗರಿಷ್ಠ ₹15 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ಇದರಿಂದ ಅಣೆಬೆ ಉತ್ಪಾದನೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಉತ್ತೇಜನ ಸಿಗಲಿದೆ. ಅಲ್ಲದೆ, ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಶೇ.35 ಮತ್ತು ನಗರ ಪ್ರದೇಶದಲ್ಲಿ ಶೇ.25ರಷ್ಟು ಸಬ್ಸಿಡಿಯೊಂದಿಗೆ ಅಣೆಬೆ ಕೃಷಿ ಘಟಕ ಸ್ಥಾಪಿಸಲು ಅವಕಾಶವಿದೆ.

Vijayaprabha Mobile App free

ಅರ್ಜಿ ವಿವರ

ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಉತ್ತೇಜನ ಯೋಜನೆಯಡಿ ಸಹಾಯಧನ ಲಭ್ಯವಿದ್ದು, ಜಿಲ್ಲಾಮಟ್ಟದ ಕೈಗಾರಿಕಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವೇಳೆ ಆಧಾ‌ರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಭೂ ದಾಖಲೆಗಳು ಅಥವಾ ಬಾಡಿಗೆ ಒಪ್ಪಂದ ಪತ್ರ, ಜಾತಿ ಪ್ರಮಾಣ ಪತ್ರ (ಅನ್ವಯಿಸಿದರೆ), ಪಾಸ್‌ಪೋರ್ಟ್ ಗಾತ್ರದ ಫೋಟೋ ಹಾಗೂ ಯೋಜನಾ ವರದಿ ಕಡ್ಡಾಯವಾಗಿರುತ್ತದೆ.

ತಜ್ಞರ ಅಭಿಪ್ರಾಯ

ಕೃಷಿ ತಜ್ಞರ ಪ್ರಕಾರ, ಅಣಬೆ ಕೃಷಿಯು ಕಡಿಮೆ ಜಾಗದಲ್ಲಿ, ಕಡಿಮೆ ಸಮಯದಲ್ಲಿ ಮತ್ತು ನಿರಂತರ ಆದಾಯವನ್ನು ನೀಡುವ ಉತ್ತಮ ಉದ್ಯೋಗ ಹಾಗೂ ಆದಾಯದ ಮೂಲವಾಗಿದೆ. ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳಿಂದ ತರಬೇತಿ ಪಡೆಯುವುದರಿಂದ ಅಣಬೆ ಕೃಷಿಯಲ್ಲಿ ಯಶಸ್ಸು ಸಾಧಿಸಲು ಸಹಕಾರಿಯಾಗಲಿದೆ. ಸರ್ಕಾರದ ಸಹಾಯಧನದೊ೦ದಿಗೆ ರೈತರು ಈ ಕೃಷಿಯಲ್ಲಿ ತೊಡಗಿಸಿಕೊಂಡು ಉತ್ತಮ ಆದಾಯ ಗಳಿಸಬಹುದು ಎ೦ದು ಅಭಿಪ್ರಾಯಪಟ್ಟಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply