ಕೇಂದ್ರ ಸರ್ಕಾರ ಆರಂಭಿಸಿದ ಈ ಡಿಜಿಟಲ್ ಇಂಡಿಯಾ ಅಭಿಯಾನ 6 ವರ್ಷ ಪೂರೈಸಿದ್ದು, ಈ ವಾರ್ಷಿಕೋತ್ಸವದ ಅಂಗವಾಗಿ Paytm ಭರ್ಜರಿ ಆಫರ್ ನೀಡಿದೆ.
ಹೌದು, ಪೆಟಿಎಂ ಬಳೆಕೆದಾರರು, ವ್ಯಾಪಾರಿಗಳಿಗೆ ಬರೋಬ್ಬರಿ 50 ಕೋಟಿ ರೂಪಾಯಿ ಕ್ಯಾಶ್ ಬ್ಯಾಕ್ ಆಫರ್ ನೀಡಿದ್ದು, ನೂತನ ಆಫರ್ ಪ್ರಕಾರ, Paytm ಆ್ಯಪ್ ಮೂಲಕ ಮಾಡುವ ಪ್ರತಿ ಡಿಜಿಟಲ್ ವಹಿವಾಟಿಗೆ ಕ್ಯಾಶ್‌ಬ್ಯಾಕ್ ರೂಪದಲ್ಲಿ ಬಹುಮಾನಗಳನ್ನು ಸ್ವೀಕರಿಸಬಹುದಾಗಿದ್ದು, QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪ್ರತಿಯೊಂದು ವಹಿವಾಟಿಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು.
ಈ 50 ಕೋಟಿ ರೂಪಾಯಿ ಕ್ಯಾಶ್‌ಬ್ಯಾಕ್ ಆಫರ್ ಆರು ತಿಂಗಳ ಕಾಲ ಚಾಲ್ತಿಯಲ್ಲಿರಲಿದ್ದು, ಬಳಕೆದಾರರು, ವ್ಯಾಪಾರಿಗಳು, ಪೇಟಿಎಂ ಆ್ಯಪ್ ಮೂಲಕ ಪ್ರತಿ ವಹಿವಾಟಿಗೆ ಕ್ಯಾಶ್ ಬ್ಯಾಕ್ ಹಾಗು ಗಿಫ್ಟ್ ವೋಚರ್ ಗಳನ್ನು ಪಡೆಯಬಹುದು.